

ಮದ್ದೂರು: ತಾಲೂಕಿನ ಉಪ್ಪಾರ್ ದೊಡ್ಡಿ ಗ್ರಾಮದ ಗ್ರಾಮದಲ್ಲಿ ಶನಿವಾರ ಮುಂಜಾನೆ ಮಳೆಯಿಂದ ಗುತ್ತಲು ದೇವಿಯ ದೇವಸ್ಥಾನದ ಗೋಪುರ ಕುಸಿದು ಕೆಳಗೆ ಬಿದ್ದಿದೆ.
ರಾತ್ರಿ ಮಳೆ ಬಂದ ಪರಿಣಾಮ ಗೋಪುರದಲ್ಲಿದ್ದ ದೇವರ ಮೂರ್ತಿಗಳು ಬಿದ್ದಿದ್ದು ಇದನ್ನು ಗ್ರಾಮಸ್ಥರು ನೋಡಿ ವಿಗ್ರಹದ ಮೂರ್ತಿಗಳನ್ನು ಪ್ರತ್ಯೇಕವಾಗಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಹೊಸ ವಿಗ್ರಹ ಮತ್ತು ಗೋಪುರ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.