ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಸಾವು

Published on

ಶಿಡ್ಲಟ್ಟ: ತಾಲೂಕಿನ ಬೋದಗೂರು ಗ್ರಾಮದ ಯುವಕ ಲ್ಮಪತಿ (40) ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ನೃತ್ಯ ಮಾಡುವಾಗಲೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇದರಿಂದಾಗಿ ಗಣಪತಿ ಹಬ್ಬದ ಸಂಭ್ರಮದಲ್ಲಿರಬೇಕಾದ ಗ್ರಾಮದಲ್ಲಿ ಲ್ಮಪತಿಯ ಸಾವಿನಿಂದ ಸೂತಕದ ಛಾಯೆ ಆವರಿಸಿದೆ. 4ನೇ ದಿನ ಶನಿವಾರ ರಾತ್ರಿ ಗಣಪತಿ ಮೆರವಣಿಗೆ ನಡೆಸಿದ್ದಾರೆ. ಗ್ರಾಮದ ಎಲ್ಲ ಬೀದಿ ಬೀದಿಗಳಲ್ಲೂ ಮೆರವಣಿಗೆ ನಡೆಸಿದ್ದು, ಮೆರವಣಿಗೆ ವೇಳೆ ಹಾಕಿದ್ದ ಆಪ್ತರಕ್ಷಕ ಸಿನಿಮಾದ ಸುಂದರ ವದನ... ಹಾಡಿಗೆ ಜತೆಗಾರನೊಂದಿಗೆ ಲ್ಮಪತಿ ನೃತ್ಯ ಮಾಡುವಾಗಲೆ ಕುಸಿದು ಬಿದ್ದಿದ್ದಾರೆ. ನಿತ್ರಾಣಗೊಂಡು ಬಿದ್ದಿರಬಹುದೆಂದು ಲ್ಮಪತಿಯನ್ನು ಎಬ್ಬಿಸಿದರೂ ಎದ್ದಿಲ್ಲ. ಕೂಡಲೇ ಶಿಡ್ಲಟ್ಟದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net