

ಶನಿವಾರಸಂತೆ: ಸಮೀಪದ ರಾಮನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾಫಿತೋಟಗಳಿಗೆ ಲಗ್ಗೆ ಇಟ್ಟು ಫಸಲು ನಾಶಗೊಳಿಸುತ್ತಿವೆ.
ಮಂಜುನಾಥ್ ಎಂಬುವವರ ತೋಟದಲ್ಲಿ ಶುಕ್ರವಾರ ನಾಲ್ಕು ಕಾಡು ಕೋಣಗಳು ನೂರಕ್ಕೂ ಹೆಚ್ಚು ಗಿಡಗಳನ್ನು ನಾಶಗೊಳಿಸಿವೆ. ಕೊಯ್ಲಿಗೆ ಬಂದಿದ್ದ ಕಾಫಿ ಗಿಡ ನಾಶಗೊಳಿಸಿರುವುದರಿಂದ ಸಾಕಷ್ಟು ನಷ್ಟ ಉಂಟಾಗಿದೆ.