ಗಂಡ-ಅತ್ತೆ-ಮಾವನ ಮೇಲೆ ಈಳಿಗೆ ಮಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ! ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

murder
Published on

ಮಂಡ್ಯ: ಕೋಪಕ್ಕೆ ಬುದ್ಧಿ ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಈ ದುರಂತವೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕೆ ಕುಪಿತಗೊಂಡ ಮಹಿಳೆಯೊಬ್ಬಳು ಗಂಡನ ಸಾವಿಗೆ ಕಾರಣವಾಗಿದ್ದು, ಅತ್ತೆ-ಮಾವರನ್ನೂ ಸಾವಿನ ಕೂಪಕ್ಕೆ ದೂಡಿದ್ದಾಳೆ.

ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದ ನಿವಾಸಿ ನಾಗಮಣಿ, ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ ನಾಗರಾಜು(43), ಅತ್ತೆ ಕುಳಮ್ಮ(60), ಮಾವ ವೆಂಕಟೇಗೌಡ(70)ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಳು. ತೆಂಗಿನಕಾಯಿ ತುರಿಯುವ ಮಣೆಯಿಂದ ನಾಗಮಣಿ ಮೂವರ ಮೇಲೂ ಮನಸೋಇಚ್ಛೆ ಹಲ್ಲೆ ನಡೆಸಿದ್ದಳು.

ಪತ್ನಿಯಿಂದ ತೀವ್ರ ಹಲ್ಲೆಗೊಳಲಾಗಿದ್ದ ನಾಗರಾಜುನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾನೆ. ಇನ್ನು ನಾಗರಾಜುವಿನ ತಂದೆ-ತಾಯಿ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net