ವಿದ್ಯುತ್ ತಂತಿ ತಗುಲಿ ಸುಟ್ಟು ಕರಕಲಾದ ತೆಂಗಿನಮರಗಳು

IMG-20240507-WA0337
Published on

ಅರಸೀಕೆರೆ ಗ್ರಾಮಾಂತರ: ವಿದ್ಯುತ್ ತಂತಿಗಳ ಘರ್ಷಣೆಯಿಂದ ತಾಲೂಕಿನ ಗಡಿಭಾಗವಾದ ಕುಂಬಾರ ಘಟ್ಟೆ ಗ್ರಾಮದ ಮಾಡಾಳು ಶ್ರೀಗುರು ಶಿವಬಸವಕುಮಾರ ಆಶ್ರಮದ ತೋಟಕ್ಕೆ ಭಾನುವಾರ ಬೆಂಕಿ ಬಿದ್ದು ಸುಮಾರು 300 ತೆಂಗಿನಮರಗಳು ಹಾಗೂ ಅಪಾರ ಪ್ರಮಾಣದ ಶುಂಠಿ ಬೆಳೆ ಸುಟ್ಟು ಕರಕಲಾಗಿದೆ.


ಮಾಡಾಳು ಶ್ರೀಗುರು ಶಿವಬಸವಕುಮಾರ ಅಶ್ರಮದ ಪೀಠಾಧ್ಯಕ್ಷ ಶ್ರೀಸಿದ್ದಬಸವ ಸ್ವಾಮೀಜಿ ಅವರ ಹತ್ತು ಎಕರೆ ತೋಟ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ.


ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದರಾದರೂ ಅವರು ಬರುವಷ್ಟರಲ್ಲೇ ಸುಮಾರು 300 ತೆಂಗಿನ ಮರಗಳು, ಅಪಾರ ಪ್ರಮಾಣದ ಶುಂಠಿ ಬೆಳೆ ಸುಟ್ಟು ಕರಕಲಾಗಿತ್ತು. ಈ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net