ರಸ್ತೆ ಮಧ್ಯೆ ಕಂಟಕವಾದ ಕಲ್ಪವೃಕ್ಷ!

Capture
Published on

ಬೆಂಗಳೂರು: ಕೆಂಗೇರಿ ಸಮೀಪದ ಕೊಡಿಪಾಳ್ಯ 3ನೇ ಅಡ್ಡ ರಸ್ತೆಯ ಮಧ್ಯೆ ತೆಂಗಿನಮರ ಬೆಳೆದು ನಿಂತಿದ್ದು, ಸುತ್ತುಮುತ್ತಲ ನಿವಾಸಿಗಳಿಗೆ ತಲೆನೋವಾಗಿದೆ. ಬಡಾವಣೆ ನಿಮಾರ್ಣದ ವೇಳೆ ತೆರವುಗೊಳಿಸಲು ಬಿಟ್ಟುಹೋಗಿದ್ದ ತೆಂಗಿನ ಮರ ಇದಾಗಿದ್ದು, ಬಳಿಕ ಬಿಬಿಎಂಪಿಯಿಂದ ಅದರ ಸುತ್ತ ಟಾರ್​ ರಸ್ತೆಯನ್ನೂ ಹಾಕಲಾಗಿದೆ.

ಈ ಮರವು ರಸ್ತೆಯ ಮಧ್ಯ ಭಾಗದಲ್ಲಿ ಇರುವುದರಿಂದ ತೆರವು ಗೊಳಿಸುವುದು ಅನಿವಾರ್ಯವಾಗಿದೆ. ಮರದಿಂದ ಬಾಡಿ ಹೋದ ತೆಂಗಿನ ಗರಿ, ಎಳನೀರು ಇತ್ಯಾದಿ ಬೀಳುವ ಸಾಧ್ಯತೆ ಇರುವುದರಿಂದ ವಾಹನ ಸವಾರರಿಗೆ ಹಾಗೆ ಅದರ ಸುತ್ತ ನಡೆದಾಡುವವರಿಗೆ ಆತಂಕ ಉಂಟಾಗಿದೆ. ಹಲವು ಬಾರಿ ಈ ರೀತಿ ಟನೆಗಳು ನಡೆದು ವಾಹನಗಳು ಜಖಂಗೊಂಡಿದೆ. ಹಲವರ ತಲೆಗೆ ಬಿದ್ದು ಏಟಾಗಿ ಆಸ್ಪತ್ರೆ ಸೇರಿದ ಉದಾಹರಣೆಗಳೂ ಇವೆ. ಮೊದಲನೆಯದಾಗಿ ತೆಂಗಿನ ಮರ ಈ ರೀತಿ ರಸ್ತೆಯ ಮಧ್ಯೆ ಇರುವುದೇ ಅಪಾಯದ ಸೂಚಕ. ಇದೀಗ ಅಪಘಾತದ ಭೀತಿ ಅಧಿಕವಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಈಗಾಗಲೇ ಬಿಬಿಎಂಪಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ 10 ತಿಂಗಳಾದರೂ ಯಾವುದೇ ಸ್ಪಂದನೆ ಲಭಿಸಿಲ್ಲ ಎಂದು ಸ್ಥಳಿಯರು ಅವಲತ್ತುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶ್ರೀ ಮರವನ್ನು ತೆರವುಗೊಳಿಸಿ ಅನುಕೂಲ ಮಾಡಬೇಕೆಂಬುದು ಸ್ಥಳಿಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net