

ಹೊನ್ನಾವರ: ಪಟ್ಟಣದ ಪ್ರಭಾತನಗರದ ಎಸ್ಡಿಎಂ ಕಾಲೇಜಿನ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ತೆಂಗಿನ ತೋಟದಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದೆ.
ಮಧ್ಯಾಹ್ನ 11 ಗಂಟೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, ತೋಟದೆಲ್ಲದೆ ವ್ಯಾಪಿಸಿ ಕೆಲ ಕಾಲ ಆತಂಕ ಉಂಟು ಮಾಡಿತ್ತು. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದರು.
ತೋಟದಲ್ಲಿ ಬೆಳೆದಿದ್ದ ಒಣಹುಲ್ಲು ಹಾಗೂ ಕಟ್ಟಿಗೆಗಳಿಗೆ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿವೆ. ಪಕ್ಕದಲ್ಲೆ ಇರುವ ಮನೆ ಹಾಗೂ ಇತರೆ ಕಟ್ಟಡಗಳು ಬೆಂಕಿಯ ಕೆನ್ನಾಲಿಗೆಯಿಂದ ಸ್ವಲ್ಪದರಲ್ಲೆ ಪಾರಾದವು. ಸತತ ಒಂದು ಗಂಟೆಗೂ ಅಧಿಕ ಸಮಯ ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿದರು.