ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನಿಗೆ ಕಚ್ಚಿದ ನಾಗರ ಹಾವು

Death
Published on

ರಾಮನಗರ: ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನೊಬ್ಬ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾನೆ. ಚಿಕ್ಕನಹಳ್ಳಿ ಗ್ರಾಮದ ಮುತ್ತುರಾಜ್​ (24) ಹಾವು ಕಚ್ಚಿ ಮೃತಪಟ್ಟ ಯುವಕ.

ಚಿಕ್ಕನಹಳ್ಳಿ ಗ್ರಾಮದ ರಾಮಕೃಷ್ಣಯ್ಯ ಎಂಬುವವರ ಮಗ ಮುತ್ತುರಾಜ್​. ರಾಮಕೃಷ್ಣಯ್ಯ ಹಸು ಸಾಕಿದ್ದರು. ಮುತ್ತುರಾಜ್​ ನಿತ್ಯ ಹೊಲಕ್ಕೆ ತೆರಳಿ ಬೆಳೆದಿದ್ದ ಮೇವು ಕುಯ್ದು ತರುತ್ತಿದ್ದ. ಸೋಮವಾರ ಮಧ್ಯಾಹ್ನ ಕೂಡ ಎಂದಿನಂತೆ ಮೇವು ತರಲು ಹೊಲಕ್ಕೆ ತೆರಳಿದ ಈ ವೇಳೆ ನಾಗರಹಾವು ಕಚ್ಚಿತು. ಕೂಡಲೇ ಪಕ್ಕದ ಹೊಲದಲ್ಲಿದ್ದವರು ಧಾವಿಸಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಚ್ಚಿದವರಿಗೆ ನೀಡುವ ಇಂಜೆಕ್ಷನ್​ ಇಲ್ಲದ ಪರಿಣಾಮ ಮೃತಪಟ್ಟಿದ್ದಾನೆ ಎಂದು ಯುವಕನ ಪಾಲಕರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net