

ಬೆಂಗಳೂರು:"ದಿ ತಮಿಳುನಾಡು ಹ್ಯಾಂಡ್ಲೂಮ್ ವೀವೆರ್ಸ್ ಕೋ-ಆಪರೇಟಿವ್ ಸೊಸೈಟಿ' ವಿಜಯನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಿರುವ 15 ದಿನಗಳ "ಕೋ-ಆಪ್ಟೆಕ್ಸ್' ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ.
"ಮೆಗಾ ಕ್ಲಿಯರನ್ಸ್ ಸೇಲ್'ನಲ್ಲಿ ಸಿಲ್ಕ್ ಸೀರೆ, ಕೊಯಮತ್ತೂರ್ ಸಾಫ್ಟ್ ಸಿಲ್ಕ್, ಚೋರಾ ಕಾಟನ್ ಸ್ಯಾರಿ, ಗೃಹೋಪಯೋಗಿ ವರ ಮತ್ತು ವಧುಗೆ ಬೇಕಿರುವ ಉಡುಪುಗಳು, ಚೂಡಿದಾರ, ಶರ್ಟ್ಸ್ ಸೇರಿ ಇತರ ಉತ್ಪನ್ನಗಳ ಮೇಲೆ ಶೇ.20ರಿಂದ ಶೇ.70ರವರೆಗೆ ರಿಯಾಯಿತಿ ದೊರೆಯಲಿದೆ. ನ.30ರವರೆಗೆ ಪ್ರತಿ ನಿತ್ಯ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮೇಳ ಇರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಳಿಗೆಗಳಿಗೆ ಭೇಟಿ ನೀಡಿದರು.
ನೆರೆಯ ತಮಿಳುನಾಡಿನಲ್ಲಿ ಮನೆಮಾತಾಗಿರುವ ಈ ಸಂಘವನ್ನು 1935ರಲ್ಲಿ ಸ್ಥಾಪಿಸಲಾಯಿತು. ಕೈಮಗ್ಗ ಕ್ಷೇತ್ರಕ್ಕೆ, ನೇಕಾರರ ಸಮುದಾಯದ ಕಲ್ಯಾಣಕ್ಕೆ ದುಡಿಯುತ್ತಿದೆ. ಮಾರುಕಟ್ಟೆಯ ಅಗತ್ಯತೆ ಮತ್ತು ಅಭಿರುಚಿಗೆ ಅನುಗುಣವಾಗಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ದೇಶಾದ್ಯಂತ 150 ಮಳಿಗೆಗಳನ್ನು ಹೊಂದಿದೆ. ದೇಶಾದ್ಯಂತ ಉತ್ಪನ್ನಗಳು ಮಾರಾಟಕ್ಕೆ ವೇದಿಕೆ ಕಲ್ಪಿಸುತ್ತಿದೆ. ಒಂದೇ ಸೂರಿನಡಿ ಕೈಗೆಟುಕುವ ದರದಲ್ಲಿ ಉತ್ಪನ್ನಗಳು ದೊರೆಯಲಿವೆ.
ಸೀರೆಗಳ ಸಂಗ್ರಹ:
ನೇಕರಾರರು ಸಿದ್ಧಪಡಿಸಿರುವ ಸೀರೆಗಳ ಸಂಗ್ರಹವೇ ನೋಡುಗರ ಗಮನ ಸೆಳೆಯುತ್ತಿದೆ. ಶುದ್ಧ ರೇಷ್ಮೆಯಿಂದ ತಯಾರಿಸಲಾದ ಕಾಟನ್, ಲೆನಿನ್, ಆರ್ಟ್ ಸಿಲ್ಕ್ ಸೀರೆಗಳು, ಕೇರಳ ಸ್ಯಾರಿ, ಸಿಲ್ಕ್ ಕಾಟನ್ ಸ್ಯಾರಿ ಸೇರಿ 50ಕ್ಕೂ ಅಧಿಕ ಸೀರೆಗಳು ಒಂದೇ ಸೂರಿನಡಿ ದೊರೆಯಲಿವೆ. "ಕೋ-ಆಪ್ಟೆಕ್ಸ್ ಮಂಥ್ಲಿ ಸೇವಿಂಗ್ ಸ್ಕೀಂ' ಅಡಿ ಗ್ರಾಹಕರಿಗೆ ಶೇ.58ರಷ್ಟು ಹೆಚ್ಚುವರಿ ಲಾಭ ಪಡೆಯಬಹುದು. 3 ರೂ.ನಿಂದ ಹೆಚ್ಚುವರಿ ಲಾಭ ಆರಂಭವಾಗಲಿದೆ.
"ಕೋ-ಆಪ್ಟೆಕ್ಸ್' ಮೇಳದಲ್ಲಿ ಉತ್ಕ ೃಷ್ಟ ಉತ್ಪನ್ನಗಳಿವೆ. ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಖರೀದಿಸಬಹುದು. ವಿಜಯನಗರ ಸೇರಿ ನಗರದ ನಿವಾಸಿಗಳು ಮೇಳದ ಲಾಭವನ್ನು ಪಡೆಯುವಂತಾಗಬೇಕು. ವಿವಿಧ ರಿಯಾಯಿತಿ ಸೌಲಭ್ಯವನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು.
| ಎಂ.ರಾಮಕೃಷ್ಣನ್. ಪ್ರಾದೇಶಿಕ ವ್ಯವಸ್ಥಾಪಕ.
ತಮಿಳುನಾಡು ಹ್ಯಾಂಡ್ಲೂಮ್ ವೀವೆರ್ಸ್ ಕೋ-ಆಪರೇಟಿವ್ ಸೊಸೈಟಿ-ಬೆಂಗಳೂರು.