ಮೈಸೂರು ವಿಧಾನಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಸಿ.ಎನ್. ಮಂಜೇಗೌಡಗೆ ರೋಚಕ ಗೆಲುವು!

JDS
Published on

ಮೈಸೂರು: ಮೈಸೂರು ವಿಧಾನಪರಿಷತ್ ಕ್ಷೇತ್ರದಲ್ಲಿನ ಅಂತಿಮ ಫಲಿತಾಂಶ ಮುದುಡಿದ ಕಮಲ, ನಳನಳಿಸಿದ ತೆನೆ ಎಂಬಂತಾಗಿದೆ. ಏಕೆಂದರೆ ಇನ್ನೇನು ಸೋತೇ ಹೋದರು ಎಂಬಂತಿದ್ದ ಜೆಡಿಎಸ್​ ಅಭ್ಯರ್ಥಿ ರೋಚಕ ಗೆಲುವು ಕಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ವಿಜೇತರಾದವರು. ಪ್ರಥಮ ಸುತ್ತಿನ ಮತಗಳ ಎಣಿಕೆಯಲ್ಲಿ 139 ಮತಗಳಿಂದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಮುನ್ನಡೆ ಕಂಡಿದ್ದರು. ಬಹುತೇಕ ಅವರೇ ಗೆಲುವು ಕಾಣುತ್ತಾರೆ ಎಂಬ ರೀತಿಯಲ್ಲಿ ಮತಗಳ ಎಣಿಕೆ ಸಾಗಿತ್ತು.

ಆದರೆ ದ್ವಿತೀಯ ಪ್ರಾಶಸ್ತ್ಯದ ಮತಗಳಿಂದಾಗಿ ಮಂಜೇಗೌಡ ಗೆಲುವಿನ ದಡ ಸೇರಿದ್ದಾರೆ. ಭಾರಿ ಹಣಾಹಣಿಯ ಈ ಸ್ಪರ್ಧೆಯಲ್ಲಿ ಮಂಜೇಗೌಡ ಅವರು ಕೇವಲ 42 ಮತಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದಾರೆ. ಮಂಜೇಗೌಡ ಅವರ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಮತಗಟ್ಟೆಯಿಂದ ನಿರ್ಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net