

ಬೆಂಗಳೂರು: ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದಲ್ಲಿ ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರ ತಂಡ ಬುಧವಾರ ನಡೆಸಬೇಕಿದ್ದ ಅಂತಿಮ ಹಂತದ ಪರಿಶೀಲನೆ ಪ್ರಕ್ರಿಯೆ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಸದ್ಯದಲ್ಲೇ ಸಿಎಂಆರ್ಎಸ್ ಅಧಿಕಾರಿಗಳು ದೆಹಲಿಯಿಂದ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ವೇಗ, ವಿದ್ಯುತ್ ಸಂಚಾರ, ರೈಲುಗಳ ಸಂಚಾರ ಸಮಯ, ಸಿಗ್ನಲಿಂಗ್ ಬಾಗಿಲು ತೆರೆದುಕೊಳ್ಳುವ ಸಮಯ, ನಿಲ್ದಾಣಗಳಲ್ಲಿ ಮೂಲಸೌಕರ್ಯ ಮುಂತಾದ ಕ್ರಮಗಳ ಬಗ್ಗೆ ಸಿಎಂಆರ್ಎಸ್ ಅಧಿಕಾರಿಗಳ ತಂಡ ಪರಿಶೀಲಿಸಿ ಅಂತಿಮ ವರದಿ ನೀಡಬೇಕಿದೆ. ಬಳಿಕ ಬೈಯಪ್ಪನಹಳ್ಳಿ&ಕೆ.ಆರ್.ಪುರ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಮುಂದಿನ ವಾರದಲ್ಲಿ ಮತ್ತೊಂದು ವಿಸ್ತರಿತ ಮಾರ್ಗವಾದ ಕೆಂಗೇರಿ&ಚಲ್ಲಟ್ಟ ನಡುವೆ ಸಿಎಂಆರ್ಎಸ್ ತಂಡ ಪರಿಶೀಲನೆ ಆರಂಭಿಸಲಿದೆ ಎನ್ನಲಾಗಿದೆ.