

ಬೆಂಗಳೂರು: ಅಮೆರಿಕದಲ್ಲಿರುವ ಕನ್ನಡಿಗರೂ ಕರೊನಾ ಸಂಕಷ್ಟದಲ್ಲಿ ಸಿಲುಕಿದ್ದು, ಅವರಿಗೆ ಧೈರ್ಯ ತುಂಬಲು ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದಾರೆ.
ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಘಟನೆ ಸಹಯೋಗದಿಂದ ಈ ಸಂವಾದ ಆಯೋಜಿಸಲಾಗಿದ್ದು, ಭಾನುವಾರ ರಾತ್ರಿ 9.15ಕ್ಕೆ (ಅಲ್ಲಿನ ಕಾಲಮಾನ ಬೆಳಗ್ಗೆ 11.30) ಬಿಎಸ್ವೈ ಮತ್ತು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಲಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನೆರೆ, ಕೊಡಗಿನಲ್ಲಿ ಭೂಕುಸಿತ ಸೇರಿ ಹಲವು ಸಂದರ್ಭಗಳಲ್ಲಿ ಅಮೆರಿಕ ಕನ್ನಡಿಗರು ರಾಜ್ಯಕ್ಕೆ ಸ್ಪಂದಿಸಿರುವುದಾಗಿ ಅಕ್ಕ ಸಂಘಟನೆ ಅಧ್ಯಕ್ಷ ತುಮಕೂರು ದಯಾನಂದ ನೆನಪಿಸಿದ್ದಾರೆ.