ಸರ್ಕಾರದ ವತಿಯಿಂದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ

CMphotos
Published on

ತುಮಕೂರು: ಶ್ರಮ ಜೀವನಕ್ಕೆ ಹೆಸರಾಗಿರುವ ತಿಗಳ ಸಮುದಾಯಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ದಿನಾಚರಣೆ ಸರ್ಕಾರದ ವತಿಯಿಂದ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.

ತುಮಕೂರಿನಲ್ಲಿ ಇಂದು ಆಯೋಜಿಸಿದ್ದ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮುಂದಿನ ವರ್ಷದಿಂದಲೇ ನಿಟ್ಟಿನಲ್ಲಿ ಅಗ್ನಿ ಬನ್ನಿಗರಾಯ ಸ್ವಾಮಿ ಜಯಂತಿ ನಡೆಸಲಾಗುವುದು ಎಂದು ಭರವಸೆ ನೀಡಿದರು.

ತೋಟಗಾರಿಕೆ ಕೆಲಸ ಮಾಡುವ ತಿಗಳ ಸೇರಿದಂತೆ ಕುಲಕಸುಬು ಮಾಡುವವರಿಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದು 50 ಸಾವಿರ ರೂ. ಸಾಲ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಕಾಯಕ ಮಾಡುವ ಸಮುದಾಯದಿಂದ ದೇಶದ ಅಭಿವೃದ್ಧಿ ಸಾಧ್ಯ, ಹಣಕ್ಕೆ ಮಹತ್ವ ಇಲ್ಲ, ದುಡಿಮೆಗೆ ಮಹತ್ವ ಎಂದರು.

ಮಹಾಭಾರತದಲ್ಲಿ ತಿಗಳ ಸಮುದಾಯದ ಬೆಂಬಲ ಇದ್ದವರು ಗೆದ್ದಿದ್ದಾರೆ, ಈ ನವಭಾರತದಲ್ಲಿಯೂ ನೀವು ಆರ್ಶಿವಾದ ಮಾಡುವವರೇ ಗೆಲ್ಲುತ್ತಾರೆ. ಆಶಿರ್ವಾದ ಮಾಡುವಾಗ ಯೋಚಿಸಿ ಮಾಡಿ, ನಿಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವವರಿಗೆ ಆರ್ಶಿವಾದ ಮಾಡಿ.
ಬಸವರಾಜ ಬೊಮ್ಮಾಯಿ
ಸಿಎಂ

ಅಗ್ನಿ ಬನ್ನಿಗರಾಯ ಸ್ವಾಮಿ ಅಧ್ಯಯನ ಪೀಠ:
ತಿಗಳ ಸಮುದಾಯದ ಇತಿಹಾಸ, ಆಚರಣೆ ಸೇರಿದಂತೆ ಜನಾಂಗದ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಜನರಿಗೆ ತಿಳಿಸಿಕೊಡುವುದು ಹಾಗೂ ಮಾಹಿತಿ ದಾಖಲಿಸಿಡುವ ಸಲುವಾಗಿ ತುಮಕೂರು ವಿವಿಯಲ್ಲಿ `ಅಗ್ನಿ ಬನ್ನಿಗರಾಯಸ್ವಾಮಿ ಅಧ್ಯಯನ ಪೀಠ' ಸ್ಥಾಪಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net