ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಸಿಎಂ ಗೂಗ್ಲಿ !

CM_Cricket
Published on

ತುಮಕೂರು: ನಲವತ್ತೊಂದು ವರ್ಷದಿಂದ ರಾಜಕೀಯದಲ್ಲಿದ್ದೇನೆ. ವಿಪಕ್ಷಗಳ ಪ್ರತಿಭಟನೆಗೆ ಹೆದರಿದ್ದರೆ ರಾಜಕಾರಣದಲ್ಲಿ ಉಳಿಯೋಕೆ ಆಗ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಗೂಗ್ಲಿ ಹಾಕಿದರು.

ನನ್ನ ರಾಜಕೀಯ ಜೀವನದಲ್ಲಿ ಮಂತ್ರಿ, ಎರಡು ಬಾರಿ ಉಪಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ಎರಡು ಬಾರಿ ಸಿಎಂ ಆಗಿದ್ದೀನಿ. ಯಾವ ತಪ್ಪು ಮಾಡದ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲವೆಂದು ತಾಲೂಕಿನ ಪಿ.ಗೊಲ್ಲಹಳ್ಳಿ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಹೇಳಿದ ಸಿದ್ದರಾಮಯ್ಯ ಇದನ್ನು ಪ್ರಾಸಂಗಿಕವಾಗಿ ಹೇಳಿದ್ದೇ ಹೊರತು ಇನ್ನೇನು ಅಲ್ಲ. ರಾಜಕೀಯ ವಿಷಯ ಇನ್ನೊಮ್ಮೆ ಮಾತಾಡೋಣ ಎಂದು ಮಾತಿಗೆ ಪೂರ್ಣವಿರಾಮ ಇಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net