

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬಜೆಟ್ ಮಂಡಿಸಿದ್ದಾರೆ. ಕೃಷಿ, ಪಶು ಸಂಗೋಪನೆ, ಕೈಗಾರಿಕೆ, ಸಾಮಾಜಿಕ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಅದರಲ್ಲೂ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಇದನ್ನೂ ಓದಿ: ದಾಖಲೆಗಾಗಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ…
ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ ಮಾಡಲಾಗಿದೆ. ನವಲಿ ಜಲಾಶಯ ನಿರ್ಮಾಣದ ಕುರಿತು ಆಂಧ್ರ-ತೆಲಂಗಾಣ ಸಿಎಂಗಳ ಜತೆ ಚರ್ಚೆ ಕುರಿತು ಪ್ರಸ್ತಾಪಿಸಲಾಗಿದೆ. ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗೆ ಪೌಷ್ಟಿಕ ಕಿಟ್, ತಾಯಂದಿರಿಗೆ ವಾತ್ಸಲ್ಯ ಕಿಟ್ ವಿತರಿಸುವುದಾಗಿ ಘೋಷಿಸಲಾಗಿದೆ. ಆದರೆ, ರಾಯಚೂರು ಜಿಲ್ಲೆಗೆ ಹೊಸ ಯೋಜನೆ, ನಿರೀಕ್ಷಿತ ಅನುದಾನ ನೀಡಿಲ್ಲ. ಒಟ್ಟಾರೆ ರಾಜ್ಯ ಆಯವ್ಯಯ ಕುರಿತು ಜಿಲ್ಲೆಯ ಸಾರ್ವಜನಿಕರು ವಿಜಯವಾಣಿ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ 45,286 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ ಯೋಜನೆ ಒದಗಿಸಿರುವುದು ಸ್ವಾಗತರ್ಹ. | ಡಾ. ಶಂಕರಾನಂದ ಜಿ., ಪ್ರಾಧ್ಯಾಪಕ, ಅರ್ಥಶಾಸ್ತ್ರ ವಿಭಾಗ, ರಾಯಚೂರು ವಿವಿಮೂಲಸೌಕರ್ಯ ಕಲ್ಪಿಸಲು ಒತ್ತುರಾಜ್ಯ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ, ಅಲ್ಲದೆ ರಾಯಚೂರು ಜಿಲ್ಲೆಗೆ ಕಿದ್ವಾಯಿ ಕ್ಯಾನ್ಸರ್ ಚಿಕಿತ್ಸೆ ಸೆಂಟರ್ ನೀಡಲಾಗಿದೆ. ಎರಡು ಜಿಟಿಟಿಸಿ ಕಾಲೇಜು, ರಾಯಚೂರು ನಗರಕ್ಕೆ ವರ್ತುಲ್ ರಸ್ತೆ, ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ನೀರು ಒದಗಿಸಲು ನವಲಿ ಜಲಾಶಯ ನಿರ್ಮಾಣದ ಕುರಿತು ಆಂಧ್ರ-ತೆಲಂಗಾಣ ಸಿಎಂ ಚರ್ಚೆ ಮಾಡುವುದಾಗಿ ತಿಳಿಸಿದ್ದು ಸ್ವಾಗತಾರ್ಹ.| ಡಾ.ರಝಾಕ ಉಸ್ತಾದ, ರಾಜ್ಯ ವಕ್ತಾರ, ಕೆಪಿಸಿಸಿ ಮಾಧ್ಯಮ ವಿಭಾಗಕಲ್ಯಾಣ ಕರ್ನಾಟಕದ ಕಡೆಗಣನೆಈ ಹಿಂದಿನ ಬಜೆಟ್‌ಗಳಂತೆ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಎಲ್ಲ ಅಭಿವೃದ್ಧಿ ಯೋಜನೆಗಳು ಬೆಂಗಳೂರು ಮತ್ತು ಬೆಳಗಾವಿ ಭಾಗ ಕೇಂದ್ರೀಕೃತವಾಗಿವೆ. ನೀರು ಮತ್ತು ವಿದ್ಯುತ್‌ನಂತಹ ಜೀವನದ ಅತ್ಯಗತ್ಯ ಅಂಶವನ್ನು ಇಡೀ ಕರ್ನಾಟಕಕ್ಕೆ ಪೂರೈಸುವಲ್ಲಿ ನಾವು ಕರ್ನಾಟಕದ ನಿರ್ಣಾಯಕ ಭಾಗವಾಗಿದ್ದೇವೆ ಎಂಬುದನ್ನು ಸರ್ಕಾರ ಮರೆತು ಬಜೆಟ್‌ನಲ್ಲಿ ಕಡೆಗಣಿಸುತ್ತಿದೆ.| ಆಯುಷ್ ಸಂಚೇತಿ, ಲೆಕ್ಕ ಪರೀಶೋಧಕ, ರಾಯಚೂರುಸಿಂಧನೂರಿಗೆ ಜಿಟಿಟಿಸಿ ಮಂಜೂರುಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆ ಹೆಚ್ಚಿನ ಅನುದಾನ ಘೋಷಿಸಿದ್ದಾರೆ. ಸಿಂಧನೂರಿಗೆ ಉದ್ಯೋಗ ಕೌಶಲ ತರಬೇತಿ ಕೇಂದ್ರ ಮಂಜೂರು ಮಾಡಿದ್ದಾರೆ. ನವಲಿ ಜಲಾಶಯಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರರು ಕೂಡ ಈಗಾಗಲೇ ಅವಳಿ ರಾಜ್ಯಗಳ ಸಿಎಂಗಳ ಜತೆಗೂ ಮಾತುಕತೆ ನಡೆಸಿದ್ದಾರೆ. ಶೀಘ್ರವೇ ವಿಶೇಷ ಸಭೆಯು ನಡೆಯಲಿದೆ.| ಹಂಪನಗೌಡ ಬಾದರ್ಲಿಚರ್ಚೆಯಲ್ಲೇ ಕಾಲಹರಣತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ಕೆಳ ಭಾಗದ ರೈತರಿಗೆ ಸಮರ್ಪಕ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ನೀರಿನ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ನವಲಿ ಜಲಾಶಯ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನಿಗದಿ ಮಾಡಿಲ್ಲ. ಬದಲಿಗೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಅವರ ಮಾತು ಅಡ್ಡಗೊಡೆ ಮೇಲೆ ದೀಪ ಇಟ್ಟಂತಿದೆ.| ಚಂದ್ರಶೇಖರ ಬಾಗೋಡಿ, ನೀರಮಾನ್ವಿ ರೈತಗರ್ಭಿಣಿಯರಿಗೆ ಕಿಟ್ ಅನುಕೂಲಇತೀಚಿನ ದಿನಗಳಲ್ಲಿ ಗರ್ಭಿಣಿಯರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಬೇಸರ ತರಿಸುತ್ತದೆ. ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳ ವಿತರಣೆಗೆ ಸರ್ಕಾರ ಮುಂದಾಗಿರುವುದು ಸ್ವಾಗತರ್ಹ.| ಭುವನೇಶ್ವರಿ, ವೈದ್ಯಕೀಯ ವಿದ್ಯಾರ್ಥಿನಿ, ಮಾನ್ವಿಶೈಕ್ಷಣಿಕ ಪ್ರೋತ್ಸಾಹ ಸ್ವಾಗತಾರ್ಹಕಲಿಕಾ ಮಟ್ಟ ಮತ್ತು ಫಲಿತಾಂಶ ಸುಧಾರಣೆಗೆ ವಿವಿಧ ಕ್ರಮ ಕೈಗೊಂಡಿರುವುದ ಸ್ವಾಗತಾರ್ಹ. ಕಲಿಕಾ ಚಿಲುಮೆ, ಗಣಿತ ಗಣಕ, ಓದು ಕರ್ನಾಟಕ, ಜ್ಞಾನ ಸೇತು, ಕೋಡಿಂಗ್ ಸೇರಿ ಸಂತಸದಾಯಕ ಕಲಿಕಾ ಅನುಭವ, ಬುನಾದಿ ಸಾಕ್ಷರತೆ, ಸಂಖ್ಯಾಜ್ಞಾನದ ಕೌಶಲ, ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದರೆ ಮೂಲ ಸೌಕರ್ಯ ಸೇರಿ ಸಂಪನ್ಮೂಲ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕಿತ್ತು.| ರಾಮಣ್ಣ ಎನ್.ಗಣೇಕಲ್, ಕ್ರೈ ಸಂಸ್ಥೆ ಸಂಚಾಲಕ, ಅರಕೇರಾನೀರಾವರಿಗೆ ಬೇಕಿತ್ತು ಪ್ರಾಮುಖ್ಯತೆಕೃಷಿ ಭಾಗ್ಯ ಯೋಜನೆ ಅಡಿ ಕೃಷಿ ಹೊಂಡ ನಿರ್ಮಾಣ, ಕೃಷಿ ಕ್ಷೇತ್ರದಲ್ಲಿ ಡಿಜಿಟಲ್, ಕೃತಕ ಬುದ್ಧಿಮತ್ತೆ ಬಳಕೆಗೆ ಕ್ರಮ, ಸಮಗ್ರ ಮಳೆಯಾಶ್ರೀತ ಕೃಷಿ ನೀತಿ ಅನುಷ್ಠಾನ ಸೇರಿ ಇತರ ಮಹತ್ವಾಕಾಂಕ್ಷೆ ಕ್ರಮಗಳು ರೈತರಿಗೆ ಅನುಕೂಲವಾಗಲಿವೆ. ರೈತರ ಆದಾಯ, ಪೌಷ್ಟಿಕ ಭದ್ರತೆ ಕುರಿತು ಅನುದಾನ ಮೀಸಲಿಟ್ಟರೆ ಸಾಲದು. ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ಪ್ರಮುಖವಾಗಿ ನೀರಾವರಿ ಅವಲಂಬಿತ ಕೃಷಿ ಜಮೀನುಗಳಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು| ಹರ್ಷವರ್ಧನ ನಾಯಕ ದೊರೆ, ತಾಲೂಕು ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ, ಅರಕೇರಾಗೌರವಧನ ಹೆಚ್ಚಳ ಉತ್ತಮ ನಿರ್ಧಾರರಾಜ್ಯ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ಗೌರವಧನ ಒಂದು ಸಾವಿರ ರೂ., ಸಹಾಯಕರಿಗೆ 750 ರೂ. ಹಾಗೂ ಅತಿಥಿ ಶಿಕ್ಷಕರಿಗೆ 2 ಸಾವಿರ ರೂ. ಹೆಚ್ಚಿರುವುದು ಸ್ವಾಗತಾರ್ಹ. ವಾರದ 6 ದಿನ ಮೊಟ್ಟೆ ವಿತರಣೆ, 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು, 100 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 50 ಪ್ರೌಢ ಶಾಲೆಗಳು ಉನ್ನತೀಕರಣ, ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಮೀಸಲಾತಿ ಘೋಷಣೆ ಮಾಡಿರುವುದು ಅನುಕೂಲವಾಗಲಿದೆ.| ಮಾಳಿಂಗರಾಯ ಹಾಲಾಪುರ, ನಾಗರಿಕ, ಕವಿತಾಳರೈತರ ಬಡ್ಡಿ ಮನ್ನಾರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆರ್‌ಡಿಸಿಸಿ ಹಾಗೂ ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಬಡ್ಡಿ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ, ಇದಕ್ಕೆ ಯಾವುದೇ ನಿಬಂಧನೆಗಳು ಹಾಕಬಾರದು. ಹಳೇ ಸಾಲ, ಹೊಸ ಸಾಲ ಎನ್ನದೆ ಎಲ್ಲರಿಗೂ ಅವಕಾಶ ನೀಡಬೇಕು.| ರಾಜಶೇಖರಯ್ಯ ಸ್ವಾಮಿ, ತಾಲೂಕು ಉಪಾಧಕ್ಷ, ರೈತ ಸಂಘ, ಸಿರವಾರನೌಕರರಿಗೆ ಭಾರಿ ನಿರಾಸೆಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಆರೋಗ್ಯ ಇಲಾಖೆ ಎನ್‌ಎಚ್‌ಎಂ ನೌಕರರು ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ವೇತನ ಹೆಚ್ಚಳ ಮಾಡದೆ ಅನ್ಯಾಯ ಮಾಡಲಾಗಿದೆ. ಈ ಬಜೆಟ್ ಹೊರಗುತ್ತಿಗೆ ನೌಕರರಿಗೆ ಭಾರಿ ನಿರಾಸೆ ಮೂಡಿಸಿದೆ.| ರವಿಶಂಕರ ಶುಕ್ಲ, ಅಧ್ಯಕ್ಷ, ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘ, ದೇವದುರ್ಗಕನಿಷ್ಠ ವೇತನ ಬೇಡಿಕೆಗೆ ಸ್ಪಂದಿಸಿಲ್ಲರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಉಣಬಡಿಸುವ ಬಿಸಿಯೂಟ ನೌಕರರಿಗೆ ಬಜೆಟ್ ಬೇಸರ ಮೂಡಿಸಿದೆ. ಕೇವಲ ಒಂದು ಸಾವಿರ ರೂ. ಹೆಚ್ಚಳ ಮಾಡುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಕನಿಷ್ಠ ವೇತನ ನೀಡಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ.| ಮರಿಯಮ್ಮ, ಜಿಲ್ಲಾಧ್ಯಕ್ಷೆ, ಬಿಸಿಯೂಟ ನೌಕರರ ಸಂಘ, ದೇವದುರ್ಗಅನುದಾನಕ್ಕೆ ಕತ್ತರಿಗ್ಯಾರಂಟಿ ಯೋಜನೆಗೆ 51 ಸಾವಿರ ಕೋಟಿ ರೂ. ಮೀಸಲು ಇಡುವ ಮೂಲಕ ಎಲ್ಲ ಇಲಾಖೆಗಳ ಅನುದಾನಕ್ಕೂ ಕತ್ತರಿ ಹಾಕಲಾಗಿದೆ. ಕೃಷಿ, ಮೂಲಸೌಲಭ್ಯಕ್ಕೆ ಅಗತ್ಯ ಅನುದಾನ ಮೀಸಲಿಟ್ಟಿಲ್ಲ. ಪ್ರಮುಖವಾಗಿ ಕೃಷಿ ಇಲಾಖೆ ಹಾಗೂ ನೀರಾವರಿಗೆ ಅಗತ್ಯ ಅನುದಾನ ಕೊಟ್ಟಿಲ್ಲ. ಹೊಸ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿಲ್ಲ. ಇದು ಓಲೈಕೆ ಬಜೆಟ್.| ಬಸವರಾಜ ಕೆ., ಕನ್ನಡ ವಿವಿ ಸಿಂಡಿಕೇಟ್ ಮಾಜಿ ಸದಸ್ಯ, ದೇವದುರ್ಗ500 ಪಬ್ಲಿಕ್ ಶಾಲೆ ಆರಂಭಪೂರ್ವ ಪ್ರಾಥಮಿಕದಿಂದ ಪದವಿಪೂರ್ವ ಹಂತದವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಯೋಜನೆ ಸ್ವಾಗತಾರ್ಹ. ಗುಣಮಟ್ಟದ ಶಿಕ್ಷಣ ನೀಡಲೂ ನಿಗಾವಹಿಸಬೇಕು. ಶಾಲಾ ಮಕ್ಕಳಿಗೆ ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ವಾರದಲ್ಲಿ ಮೂರು ದಿನ ಕೊಡುತ್ತಿದ್ದ ರಾಗಿ ಗಂಜಿಯನ್ನು ಐದು ದಿನಕ್ಕೆ ವಿಸ್ತರಿಸುತ್ತಿರುವುದು ಶಾಘ್ಲನೀಯ.| ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಅಧ್ಯಕ್ಷ, ಲಯನ್ಸ್ ಕ್ಲಬ್, ಮಸ್ಕಿಪ್ರಾದೇಶಿಕ ಸಹಕಾರ ಭವನಕ್ಕೆ ಸ್ವಾಗತಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಕಾರ ಕ್ಷೇತ್ರ ಬಹಳ ಸಮರ್ಥವಾಗಿ ಮುನ್ನಡೆದಿದೆ. ಸಹಕಾರಿಗಳಿಗಾಗಿ ಕಲಬುರಗಿಯಲ್ಲಿ ಸಹಕಾರ ಭವನ ನಿರ್ಮಾಣ ಮಾಡುವ ನಿರ್ಧಾರ ಮಾಡಿರುವುದು ಸ್ವಾಗತರ್ಹ. ಮಹಿಳಾ ಸಬಲಿಕರಣಕ್ಕಾಗಿ ಸ್ವಸಹಾಯ ಸಂಘಗಳಿಂದ ಅಕ್ಕ ಕೆಫೆ ಮತ್ತು ಕ್ಯಾಂಟಿನ್ ಸ್ಥಾಪಿಸುವುದು ಅಗತ್ಯವಾಗಿದೆ.| ಯಶೋದಾ ಶಿವಕುಮಾರ, ಅಧ್ಯಕ್ಷೆ, ಅಕ್ಷತಾನಿಧಿ ಸೌಹಾರ್ದ ಸಹಕಾರಿ ಸಂಘ, ಮಸ್ಕಿಕಕ ಭಾಗಕ್ಕೆ ಮಹತ್ವ ನೀಡಿಲ್ಲರಾಜ್ಯ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿಲ್ಲ. ರಾಯಚೂರು ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾವೇ ಮುಖ್ಯವಾಗಿದೆ. ನೀರಾವರಿ, ಕೃಷಿ ಉತ್ತೇಜನಕ್ಕೆ ಇನ್ನಷ್ಟು ಒತ್ತು ನೀಡಬೇಕಿತ್ತು. ಈಗಾಗಲೇ ಮಂಜೂರಾದ ಯೋಜನೆಗಳನ್ನು ಬಜೆಟ್‌ನಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ. ಈ ಬಜೆಟ್‌ನಲ್ಲಿ ವಿಶೇಷ ಏನಿಲ್ಲ. ಅಭಿವೃದ್ಧಿಗೆ ಪೂರಕವಾಗಿಲ್ಲ.| ಶಾಶ್ವತಸ್ವಾಮಿ ಮುಕ್ಕುಂದಿಮಠ, ನಿವೃತ್ತ ಪ್ರಾಚಾರ್ಯ, ಸಿಂಧನೂರುಉದ್ಯೋಗ ಸೃಷ್ಟಿ ಇಲ್ಲಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು, ಸರ್ಕಾರಿ ಪದವಿಪೂರ್ವ ಕಾಲೇಜ್‌ಗಳ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಕೇವಲ 2 ಸಾವಿರ ರೂ. ಹೆಚ್ಚಿಸಲಾಗಿದೆ. ಕನಿಷ್ಠ 5 ಸಾವಿರ ರೂ. ಹೆಚ್ಚಳವಾಗಬೇಕಿತ್ತು. ಇನ್ನೂ ಉದ್ಯೋಗ ಸೃಷ್ಟಿಸುವ ಯೋಜನೆ ಪ್ರಸ್ತಾಪಿಸಿಲ್ಲ. ಮಹಿಳೆಯರ ಸ್ವಯಂ ಉದ್ಯೋಗಕ್ಕೂ ಆದ್ಯತೆ ಸಿಗಬೇಕಿತ್ತು. ರಾಯಚೂರು ಜಿಲ್ಲೆಗೆ ಮಹತ್ವದ ಕೊಡುಗೆ ಇಲ್ಲ.| ಚನ್ನಬಸಮ್ಮ ಪಿ. ಮಲ್ಲಾಪುರ, ಉಪನ್ಯಾಸಕಿ, ಸಿಂಧನೂರುಮೂಗಿಗೆ ತುಪ್ಪ ಸವರುವ ಬಜೆಟ್ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ರಾಯಚೂರಿಗೆ ಕಿದ್ವಾಯಿ ಕ್ಯಾನ್ಸರ್ ಘಟಕ, ಜಿಟಿಟಿಸಿ ಕಾಲೇಜು ಹಾಗೂ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಯಚೂರಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 53 ಕೋಟಿ ಘೋಷಿಸಲಾಗಿದೆ. ಆದರೆ, ದಕ್ಷಿಣ ಕರ್ನಾಟಕ ಭಾಗಕ್ಕೆ ನೀಡಿದಷ್ಟು ಆದ್ಯತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿಲ್ಲ.| ಜಗದೀಶ ಸಾಲಿಮಠ, ವ್ಯಾಪಾರಿ, ಲಿಂಗಸುಗೂರುಹೆದ್ದಾರಿಗಳ ನಿರ್ಮಾಣಕ್ಕೆ ಆದ್ಯತೆರಾಜ್ಯ ಬಜೆಟ್‌ನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಪಶು ಸಂಗೋಪನೆ, ಕೈಗಾರಿಕೆ, ಸಾಮಾಜಿಕ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ರಾಯಚೂರಿಗೆ ಕಿದ್ವಾಯಿ ಮತ್ತು ಲಿಂಗಸುಗೂರು ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ರಸ್ತೆಗಳ ಮತ್ತು ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.| ಪ್ರಭುಲಿಂಗ ಮೇಗಳಮನಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ದಸಂಸ, ಲಿಂಗಸುಗೂರುಜನಸಾಮಾನ್ಯರಿಗೆ ತಣ್ಣೀರುಜನಸಾಮಾನ್ಯರಿಗೆ ಅನುಕೂಲವಾಗುವ ಬದಲಿಗೆ ಹೊರೆಯಾಗುವ ಬಜೆಟ್ ಅನ್ನು ಸಿದ್ದರಾಮಯ್ಯ ಸರ್ಕಾರ ಮಂಡಿಸಿದೆ. ಬಡ, ಕೂಲಿಕಾರ್ಮಿಕರ ಹಾಗೂ ಹಿಂದುಳಿದ ವರ್ಗಗಳ ಜನಾಂಗದ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಒಂದು ಕಣ್ಣಿಗೆ ಬಣ್ಣ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಜಿಲ್ಲೆಯ ಅನೇಕ ಯೋಜನೆಗಳಿಗೆ ನಿರೀಕ್ಷಿತ ಬಜೆಟ್ ಘೋಷಿಸದೆ ತಣ್ಣೀರು ಎರಚಿದೆ.| ಗುರುಬಸಪ್ಪ ಸಜ್ಜನ್, ಸಮಾಜ ಸೇವಕ, ಮುದಗಲ್ಗ್ಯಾರಂಟಿ ಯೋಜನೆಗೆ ಹೆಚ್ಚುಸರ್ವರಿಗೂ ಸಮಪಾಲು ಎಂಬಂತೆ ರಾಜ್ಯದ ಆರ್ಥಿಕತೆ ಹಿತದೃಷ್ಟಿಯಿಂದ ರಾಜ್ಯದ ವಿವಿಧ ಜನಾಂಗದವರಿಗೆ ಅನೇಕ ಸವಲತ್ತುಗಳನ್ನು ಬಜೆಟ್‌ನಲ್ಲಿ ಕಲ್ಪಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ಗೌರವ ಧನ ಹೆಚ್ಚಿಸಿದ್ದು ಸ್ವಾಗತಾರ್ಹ. ಬಡವರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.| ಹಾಜಿಮಲಂಗ ಬಾಬಾ, ನಿವೃತ್ತ ಶಿಕ್ಷಕ, ಮುದಗಲ್