ಜನರ ನಂಬಿಕೆ, ವಿಶ್ವಾಸಾರ್ಹತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಿ

Camera_CM
Published on

ತುಮಕೂರು: ಪತ್ರಿಕಾಧರ್ಮಕ್ಕೆ ಯಾವುದೇ ಕಾಲದಲ್ಲು ಧಕ್ಕೆ ಬಾರದಂತೆ ನಡೆದುಕೊಳ್ಳುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಸಿಎಂ ಸಿದ್ದರಾಮಯ್ಯ ಕರೆನೀಡಿದರು.

ನಗರದ ಸಿದ್ದಾರ್ಥ ತ್ರಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 2ದಿನಗಳ ರಾಜ್ಯಮಟ್ಟದ 39ನೇ ರಾಜ್ಯಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮದು ಶಕ್ತಿಯುತ ಮಾಧ್ಯಮ. ನಮಗಿಂತ ನಿಮ್ಮನ್ನು ಜನರು ಹೆಚ್ಚು ನಂಬುತ್ತಾರೆ. ಅದರಿಂದ ಅವರ ನಂಬಿಕೆ, ವಿಶ್ವಾಸಾರ್ಹತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆ ತರುವ ಪ್ರತಿಯೊಬ್ಬರು ಆತ್ಮವಾಲೋಕನ ಮಾಡಿಕೊಳ್ಳಬೇಕು ಎಂದರು.

ಪತ್ರಿಕೋದ್ಯಮ ವೃತ್ತಿಯಾಗೇ ಇರಬೇಕು. ಕೆಲವು ವರ್ಷಗಳಿಂದೀಚೆ ಉದ್ಯಮವಾಗಿ ಮಾರ್ಪಟ್ಟಿದೆ. ವೃತ್ತಿ ಆಗಿದ್ದಾಗ ಸಮಾಜದ, ಜನರ ಹಿತ ಮುಖ್ಯವಾಗಿರುತ್ತದೆ. ಉದ್ಯಮ ಆದ ಕೂಡಲೇ ಅದರ ಉದ್ದೇಶಗಳು ಬದಲಾಗುತ್ತವೇ. ಸಂವಿಧಾನದ ಆಶಯಗಳು ಈಡೇರಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳ ಗಟ್ಟಿಯಾಗಬೇಕು. ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲಕರವಾಗಿರಲಿದೆ. ಸಮಾಜದಲ್ಲಿರುವ ಮೇಲ ಜಾತಿ, ಕೆಳ ಜಾತಿಗಳ ನಡುವಿನ ತಾರತಮ್ಯ, ಅಸಮಾನತೆ ಕೊನೆಯಾಗಿಸುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಊಹಾ ಪತ್ರಿಕೋದ್ಯಮ ಅಪಾಯಕಾರಿ: ವಸ್ತು ಸ್ಥಿತಿ ಜೊತೆಗೆ ಮೌಲಯಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಸುದ್ದಿ ಸತ್ಯದಿಂದ ಕೂಡಿರಬೇಕು. ಯಾವುದೇ ಟನೆ ವರದಿ ಮಾಡುವಾದ ವಾಸ್ತವತೆಯನ್ನು ಜನರ ಮುಂದಿಡಬೇಕು. ಇತ್ತೀಚಿನ ದಿನಗಳಲ್ಲಿ ಊಹೆ ಪತ್ರಿಕೋದ್ಯಮ ಹೆಚ್ಚಾಗಿದ್ದು ಇದು ಒಳ್ಳೆಯಬೆಳವಣಿಗೆಯಲ್ಲ. ಸಮಾಜಮುಖಿ ಟೀಕೆ, ಆರೋಗ್ಯಕರ ಟೀಕೆಗಳಿಗೆ ಸದಾ ಸ್ವಾಗತ. ಟೀಕೆಗಾಗಿ ಟೀಕೆ ಮಾಡುವುದು ಸರಿಯಲ್ಲ ಎಂದರು.

ವೈಜ್ಞಾನಿಕತೆ, ವೈಚಾರಿಕತೆ ಇರಲಿ: ಪತ್ರಕರ್ತರು ವೈಚಾರಿಕತೆ, ವೈಜ್ಞಾನಿಕತೆ ಹೆಚ್ಚು ಬೆಳೆಸಿಕೊಳ್ಳಿ. ಸಂಶೋಧನೆ ಕೂಡ ಣಿಸಿದ್ದು ಹಾಗಾಗಿ, ಸತ್ಯಶೋಧನೆ ಕಡಿಮೆ ಆಗಿದೆ. ಪತ್ರಿಕಾ ಸ್ವಾತಂತ್ರ$್ಯವನ್ನು ನಾನು ಹೆಚ್ಚು ಗೌರವಿಸುವೆ. ಸಾಮಾಜಿಕ ಜವಾಬ್ದಾರಿಯಿಂದ ಎಲ್ಲರೂ ಹೊಣೆಗಾರಿಕೆಯನ್ನು ನಿಭಾಯಿಸಿ ಎಂದು ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿದೆ. ಇದು ಅವಕಾಶ , ಸವಾಲು ಎರಡೂ ಆಗಿದೆ. ಮೂಢನಂಬಿಕೆ, ಕಂದಾಚಾರಕ್ಕೆ ಮಾಧ್ಯಮಗಳು ಒತ್ತುಕೊಡಬಾರದು. ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೌಢ್ಯದ ಸುದ್ದಿಗಳನ್ನು , ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬೇಡಿ. ಇವತ್ತು ವೇದಿಕೆಯಲ್ಲಿ ಬಿಡುಗಡೆಯಾದ ವಿಶೇಷ ಸಂಚಿಕೆಯಲ್ಲಿ ಪತ್ರಕರ್ತರ ಕರ್ತವ್ಯ, ಸವಾಲುಗಳ ಪಟ್ಟಿ ಇದೆ. ಅದನ್ನು ಓದಿ, ಪಾಲಿಸಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆಯಿತ್ತರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್​.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್​, ಕೆ.ಷಡಕ್ಷರಿ, ಎಚ್​.ವಿ.ವೆಂಕಟೇಶ್​, ವಿಧಾನಪರಿಷತ್​ ಸದಸ್ಯರಾದ ಆರ್​.ರಾಜೇಂದ್ರ, ಚಿದಾನಂದ ಎಂ.ಗೌಡ, ಮಾಜಿ ಸಚಿವ ಸೊಗಡುಶಿವಣ್ಣ, ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು, ಚಿ.ನೀ.ಪುರುಷೋತ್ತಮ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net