ಸಿದ್ದರಾಮಯ್ಯ ಮೊಟ್ಟೆ ಪ್ರಕರಣ: ಸಿಎಂ ಹೇಳಿದ್ದೇನು? ಎಲ್ಲ ಎಸ್​ಪಿಗಳಿಗೆ ಕೊಟ್ಟ ಸೂಚನೆ ಏನು?

CMBommai
Published on

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನತ್ತ ಮೊಟ್ಟೆ ಎಸೆದ ಪ್ರಕರಣವಾಗಿ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದು, ಎಲ್ಲ ಜಿಲ್ಲಾ ಎಸ್​ಪಿಗಳಿಗೂ ಸೂಚನೆಯನ್ನೂ ನೀಡಿದ್ದಾರೆ.

ಇಂದು ರಾತ್ರಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಅವರಿಗೆ ಜೀವಭಯ ಇದೆ ಎಂಬ ಕುರಿತ ಸುದ್ದಿಗಳಿಗೆ ಸಂಬಂಧಿಸಿದ ಮಾತನಾಡಿದರು. ಸಿದ್ದರಾಮಯ್ಯ ಅವರಿಗೆ ಜೀವಭಯ ಇದೆ ಎಂಬ ಮಾಹಿತಿಯನ್ನು ಮಾಧ್ಯಮದ ಮೂಲಕ ತಿಳಿದಿದ್ದೇನೆ. ಈ ಬಗ್ಗೆ ಅವರ ಬಳಿಯೂ ಮಾತನಾಡಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸಂಪೂರ್ಣ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದರು.

ಮೊಟ್ಟೆ ಎಸೆತದ ವಿಷಯವಾಗಿ ಮಾತನಾಡಿದ ಸಿಎಂ, ಈ ಥರದ್ದು ಎರಡೂ ಕಡೆಯಲ್ಲಿ ನಡೆಯುತ್ತಿದೆ ಎಂದರು. ಇನ್ನೊಬ್ಬರ ಮನಸು ಕೆಡಿಸುವ, ಪ್ರಚೋದನೆ ಕೊಡುವ ಹಾಗೂ ಕಾನೂನುಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಆ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಎಲ್ಲ ಎಸ್​​ಪಿಗಳಿಗೂ ಆದೇಶಿಸುವಂತೆ ಸೂಚನೆ ನೀಡಿದ್ದೇನೆ ಎಂಬುದಾಗಿ ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net