ಯಾವ ಗಂಟು ಇಲ್ಲ, ಕಗ್ಗಂಟು ಇಲ್ಲ! ಸಿಎಂ ಆಯ್ಕೆ ಬಗ್ಗೆ ರಾಜಣ್ಣ ಹೇಳಿದ್ದು ಹೀಗೆ…

KNR_Web
Published on

ತುಮಕೂರು: ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಮುಂದುವರಿದಿರುವ ನಡುವೆಯೇ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಆಯ್ಕೆ ಬಗ್ಗೆ ಯಾವ ಗಂಟು ಇಲ್ಲ, ಕಗ್ಗಂಟು ಇಲ್ಲ, ಎಲ್ಲವೂ ಸರಾಗವಾಗಿದ್ದು ಮೇ.18ರಂದು ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ವಿಶ್ವಾಸ ಇದೆ, ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗ್ತಾರೆ, ಹೈಕಮಾಂಡ್ ಕೂಡ ಅವರ ಪರವಾಗಿಯೇ ಇದೆ. ಎಲ್ಲರನ್ನ ಕರೆಸಿ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನಕರವಾದ ಘಟ್ಟಕ್ಕೆ ತರಬೇಕೆಂಬ ಹಿನ್ನೆಲೆಯಲ್ಲಿ ಸಹಜವಾದ ಪ್ರಯತ್ನ ನಡೆಯುತ್ತಿದೆಯಷ್ಟೇ ಎಂದು ದೆಹಲಿ ವಿದ್ಯಾಮಾನಗಳ ಬಗ್ಗೆ ಹೇಳಿದರು.

ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಸಹಕಾರ ಕೊಡ್ತಾರೆಂಬ ವಿಶ್ವಾಸವಿದೆ. ಶೀಘ್ರದಲ್ಲಿಯೇ ಸಿಎಂ ವಿಷಯ ಅಂತಿಮವಾಗಲೇಬೇಕು ಆದರೆ, ಸಂಪುಟ ವಿಸ್ತರಣೆ ಕೊಂಚ ತಡವಾಗಬಹುದು ಎಂದರು.

ಮೇ 18ರಂದು ಸಿದ್ದರಾಮಯ್ಯ ಅವರೊಬ್ಬರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು ಮೊದಲ ಸಂಪುಟ ಸಭೆಯಲ್ಲಿಯೇ 10 ಕೆಜಿ ಅಕ್ಕಿ ಸೇರಿದಂತೆ ಎಲ್ಲಾ ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಘೋಷಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net