ಜಿಲ್ಲೆಯವರೊಬ್ಬರು ಸಿಎಂ ಆಗಲಿ ಎಂದ ಹನುಮಂತನಾಥ ಸ್ವಾಮೀಜಿ

Param_CM
Published on

ತುಮಕೂರು: ತುಮಕೂರು ದಸರಾ ಉತ್ಸವ ವೇದಿಕೆಯಲ್ಲೇ ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ ಎಂಬ ಕೂಗು ಮೊಳಗಿತು. ನಮ್ಮ ಜಿಲ್ಲೆಯಿಂದ ಒಬ್ಬರು ಮುಖ್ಯಮಂತ್ರಿ ಅಗಲಿ ಎಂದು ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಪರೋಕ್ಷ$ವಾಗಿ ಪರಮೇಶ್ವರ್​ ಸಿಎಂ ಆಗಲಿ ಎಂಬ ಆಶಯ ಹೊರಹಾಕಿದರು.

ನಂತರ ಸುದ್ದಿಗಾರರ ಬಳಿ ಸ್ಪಷ್ಟಪಡಿಸಿದ ಶ್ರೀಗಳು, ಕಳೆದ ಬಾರಿ ಪರಮೇಶ್ವರ್​ ಅವರಿಗೆ ಕೊರಟಗೆರೆ ಕ್ಷೇತ್ರದಲ್ಲಿ ಸೋಲಾಯಿತು. ಅಂದು ಸಿಎಂ ಎಂದು ಬಿಂಬಿಸಿದ್ದಾಗ ಆ ಹುದ್ದೆ ಅವರಿಂದ ಕೃತಪ್ಪಿ ಹೋಗಿತ್ತು. ಈ ಸಂದರ್ಭದಲ್ಲಾದರೂ ನಮ್ಮ ಜಿಲ್ಲೆಯಿಂದ ಒಬ್ಬರು ಸಿಎಂ ಆಗಲಿ ಅನ್ನುವುದು ತಮ್ಮ ಆಶಯವೇ ಹೊರತು. ಇದು ಯಾವುದೇ ರಾಜಕೀಯ ಪ್ರೇರಿತವಲ್ಲ. ಇದು ಧಾರ್ಮಿಕ ಕಾರ್ಯಕ್ರಮ ಅಂತ ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗಿಲ್ಲ ಎಂದರು.

ರಾಜಯಾಗಿ ನಾನು ಮಾತನಾಡಿಲ್ಲ. ಬಹುಷ ಎರಡೂವರೆ ವರ್ಷ ಸಿದ್ದರಾಮಯ್ಯ, ಎರಡೂವರೆ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್​ಗೆ ಅಂತ ಅವರ ಪಕ್ಷ ತೀರ್ಮಾನ ಮಾಡಿದೆ. ಒಂದು ವೇಳೆ ಅಂತಹ ಅವಕಾಶ ಸಿಕ್ಕಿದರೆ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಅವಕಾಶ ಲಭಿಸಲಿ ಅಂತ ಮಾತನಾಡಿದ್ದೇನೆ. ಎರಡೂವರೆ ವರ್ಷ ಅಂತ ಬಹಿರಂಗವಾಗಿ ಯಾರೂ ಹೇಳಿಲ್ಲವಾದರು, ಪಕ್ಷದಲ್ಲಿ ಆಂತರಿಕವಾಗಿ ಈ ಚರ್ಚೆ ನಡೆದಿರುವುದು ನಮಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ನಾನು ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಅಂತ ಹೇಳಿಕೊಂಡು ಬಂದಿದ್ದೀವಿ. ನಾವು ಯಾವತ್ತೂ ಯಾವುದೇ ಪಕ್ಷಕ್ಕೆ, ಮಠಕ್ಕೆ ಸೀಮಿತವಾಗಿಲ್ಲ. ನಮಗಿರುವ ಆಸೆ ನಮ್ಮ ಜಿಲ್ಲೆ ಅಭಿವೃದ್ಧಿ ಆಗಲಿ ಎಂಬುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net