

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯಲ್ಲಿರುವ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದೆ. ಎಸ್‌ಪಿ ಕಚೇರಿಯ
ಡಿಸಿಆರ್‌ಬಿಯಲ್ಲಿ ಡಿವೈಎಸ್‌ಪಿ ವಿಜಯಪ್ರಸಾದ, ಹಾಗೂ ಕಾರವಾರ ಶಹರ ಸಂಚಾರ ಠಾಣೆ ಸಿಪಿಐ ನಾಗಪ್ಪ ಅವರಿಗೆ 2022 ನೇ ಸಾಲಿನ ಪದಕ ಲಭಿಸಿದೆ. ಏಪ್ರಿಲ್ 2 ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕೆಎಸ್ಆರ್‌ಪಿ ಗ್ರೌಂಡ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುವುದು.