ತುಮಕೂರಿನಿಂದ ಏಷ್ಯನ್, ಒಲಿಂಪಿಕ್ಸ್ ಪ್ರತಿನಿಧಿಸಲಿ ಸಿಎಂ ಆಶಯ

CM_SPorts
Published on

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆ ಅಡಿ 54.56 ಕೋ.ರೂ., ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ, ಅಂತಾರಾಷ್ಟ್ರೀಯ ಗುಣಮಟ್ಟದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.

ವಿವಿ ಹೆಲಿಪ್ಯಾಡ್‌ನಲ್ಲಿ ಭಾನುವಾರ ಮಧ್ಯಾಹ್ನ ಬಂದಿಳಿದ ಬೊಮ್ಮಾಯಿ ಅವರು ನೇರವಾಗಿ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ರಸ್ತೆ ಮಾರ್ಗವಾಗಿ ತೆರಳಿ ಬಹುದಿನಗಳಿಂದ ಉದ್ಘಾಟನೆಗೆ ಕಾದಿದ್ದ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರಮಟ್ಟದ, ಏಷ್ಯನ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿಂದ ಒಬ್ಬರು ಕ್ರೀಡಾಪಟು ಭಾಗವಹಿಸಲಿ ಎಂದು ಆಶಿಸಿದರು.

ಸಚಿವರಾದ ಬಿ.ಸಿ.ನಾಗೇಶ್, ಸಿ.ಸಿ.ಪಾಟೀಲ್, ಆರಗಜ್ಞಾನೇಂದ್ರ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎ.ಎನ್.ಪ್ರಭಾಕರ್, ಅಥ್ಲೆಟಿಕ್ ಕೋಚ್ ಶಿವಪ್ರಸಾದ್ ಸೇರಿದಂತೆ ಕ್ರೀಡಾ ಹಾಸ್ಟೆಲ್‌ನ ಮಕ್ಕಳು ಸೇರಿದಂತೆ ಹಲವರು ಈ ಕ್ಷಣಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net