ಕಾಂಗ್ರೆಸ್ ಮುಕ್ತ ತುಮಕೂರು, ಕೋಲಾರ ಜೆಡಿಎಸ್ ಸಂಕಲ್ಪ

23072022 cm ibrahim
Published on

ತುಮಕೂರು: ತುಮಕೂರು ಮತ್ತು ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಜಿಲ್ಲೆಗಳನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೇವೆ, ಈಗ ತುಮಕೂರು ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡಲು ಹೊರಟ್ಟಿದ್ದೇವೆ ಎಂದರು.

11 ವಿಧಾನಸಭಾ ಕ್ಷೇತ್ರವಿರುವ ತುಮಕೂರಿನಲ್ಲಿ ಒಂದೇ ಒಂದು ಸೀಟು ಕೂಡ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ನಾವು ಸಾಬರು, ನಾವು ಹೇಳುವ ಜ್ಯೋತಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ. ಬೇಕಾದರೆ ನನ್ನ ಮಾತನ್ನು ಚುನಾವಣೆಯಾದ ಬಳಿಕ ನೆನಪಿಸಿಕೊಳ್ಳಿ ಎಂದು ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net