ಸಿಎಂ, ಡಿಸಿಎಂ ಸ್ವಾಗತಕ್ಕೆ ಸಜ್ಜು

10SND-08
ಸಿಂಧನೂರಿನ ಜನಸ್ಪಂದನಾ ಕಚೇರಿಯಲ್ಲಿ ಭಾನುವಾರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮಾತನಾಡಿದರು. ಎಸ್ಟಿ ಸೆಲ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಜವಳಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವೆಂಕನಗೌಡ ಗಿಣಿವಾರ, ಮಾಜಿ ಅಧ್ಯಕ್ಷ ಖಾಜಾಹುಸೇನ ಇದ್ದರು.
Published on

ಸಿಂಧನೂರು: ಡಿ.19ರಂದು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರರಿಗೆ ಅದ್ದೂರಿ ಸ್ವಾಗತ ನೀಡಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.

ನಗರದ ಜನಸ್ಪಂದನಾ ಕಚೇರಿಯಲ್ಲಿ ಭಾನುವಾರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವ ತಯಾರಿ ನಡೆದಿದೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಭರವಸೆಯಂತೆ ಕೊಪ್ಪಳ ಲೋಕಸಭೆಯಿಂದ ನನಗೆ ಟಿಕೆಟ್ ಸಿಗಲಿದೆ.

ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಮುಂಬರುವ ಜಿಪಂ, ತಾಪಂ ಚುನಾವಣೆಯನ್ನು ಎದುರಿಸಲು ಸನ್ನದ್ಧರಾಗಿ. ಸಾವಿರಾರು ಕಾರ್ಯಕರ್ತರ ಶ್ರಮ, ಆಶಯದಂತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದು ಜನಪರ ಯೋಜನೆ ಮೂಲಕ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ.

ಯಾವುದೇ ಕೆಲಸ ಕಾರ್ಯಗಳಿರಲಿ, ಖುದ್ದಾಗಿ ಭೇಟಿ ಮಾಡಿ ಪರಿಹರಿಸಿಕೊಳ್ಳಬೇಕು. ಕಾರ್ಯಕರ್ತರ ಆಶಯಗಳಿಗೂ ಸ್ಪಂದಿಸುವೆ ಎಂದರು.
ಎಸ್ಟಿ ಸೆಲ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಜವಳಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವೆಂಕನಗೌಡ ಗಿಣಿವಾರ, ಮಾಜಿ ಅಧ್ಯಕ್ಷ ಖಾಜಾಹುಸೇನ, ಹಬೀಬ್‌ಖಾಜಿ, ಹಂಪಮ್ಮ ವಲ್ಕಂದಿನ್ನಿ, ಫಕೀರಪ್ಪ ರಾಮತ್ನಾಳ, ಈರಣ್ಣ ಹುಲಗುಂಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net