ನಿರೀಕ್ಷೆಗಳೆಲ್ಲ ಕೃಷ್ಣಾನರ್ಪಣ ಮಸ್ತು..!

cm siddaramiah (1)
Published on

ಬಾಗಲಕೋಟೆ: ಸಂಕಷ್ಟದಲ್ಲಿ ನಂಬಿದವರು ಕೈಬಿಟ್ಟರೂ ಬಂದ ಅಪರೂಪದ ಅತಿಥಿಯನ್ನು ಕೈ ಬಿಡಬಾರದೆಂದು ಜೈ ಅಂದು ರಾಜಕೀಯ ಪುನರ್ಜೀವನ ಕಲ್ಪಿಸಿದ್ದ ಬಾದಾಮಿ ಕ್ಷೇತ್ರ ಒಳಗೊಂಡ ಬಾಗಲಕೋಟೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಪ್ರತಿಯಲ್ಲಿ ಕನಿಷ್ಠ ಸ್ಥಾನಮಾನ ನೀಡದೇ ಕೈ ಬಿಟ್ಟಿದ್ದಾರೆ. ಕೋಟೆನಾಡಿನ ಜನರ ನಿರೀಕ್ಷೆಗಳೆಲ್ಲ ಕೃಷ್ಣಾರ್ಪಣ ಮಸ್ತು ಎಂಬದಂತಾಗಿದೆ.

ಹೌದು, ಸಿದ್ದರಾಮಯ್ಯ ಸಿಎಂ ಆಗಿ ಮಂಡಿಸುತ್ತಿರುವ ಬಜೆಟ್ ಆಗಿದ್ದರಿಂದ ಅಭಿವೃದ್ದಿ ವಂಚಿತ ಚಾಲುಕ್ಯರ ನಾಡಿನ ಜನರು ಬಾದಾಮಿ ಬೆಟ್ಟದಷ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಭರವಸೆಯನ್ನು ಹುಸಿಗೊಳಿಸಿರುವ ಸಿಎಂ, ಇದೀಗ ಬಾದಾಮಿ ಗುಹೆಗಳಿಗೆ ರಾತ್ರಿ ೩ಡಿ ಪ್ರೊಜೆಕ್ಷನ, ಮಲ್ಟಿ ಮಿಡಿಯಾ, ಸೌಂಡ್ ಆ್ಯಂಡ್ ಲೈಟ್ ಹಚ್ಚುತ್ತಾರಂತೆ.

೨೦೧೩ ರಿಂದ ೨೦೧೮ ರ ಅವಽಯಲ್ಲಿ ಬಾದಾಮಿ ಜನರು ಸಿದ್ದರಾಮಯ್ಯ ಮೇಲೆ ಯಾವುದೆ ಭರವಸೆಯನ್ನು ಇಟ್ಟುಕೊಂಡಿರಲಿಲ್ಲ. ಕಾರಣ ನಮ್ಮ ಕ್ಷೇತ್ರಕ್ಕೆ ರಾಜಕೀಯ ಕಾರಣಕ್ಕೆ ಯಾವುದೆ ವಿಶೇಷ ಕೊಡುಗೆ ಕೊಡಲ್ಲ ಎಂದು. ಆದರೆ, ೨೦೧೮ರಲ್ಲಿ ಸಂಕಷ್ಟದಲ್ಲಿ ಆಪದ್ಭಾಂದವರಾಗಿದ್ದರಿಂದ ಆ ಋಣಭಾರ ತೀರಿಸಲು ತಮ್ಮ ಬಜೆಟನಲ್ಲಿ ಕೇಳದೆಯೂ ಹೆಚ್ಚಿನ ಕೊಡುಗೆ ಕೊಡುತ್ತಾರೆ ಎನ್ನುವ ಸಹಜ ನಿರೀಕ್ಷೆ ಇಟ್ಟುಕೊಂಡಿದ್ದರು. ಅದೇ ಭಾವವನ್ನು ಬಾದಾಮಿ ಕ್ಷೇತ್ರ ಒಳಗೊಂಡಿರುವ ಬಾಗಲಕೋಟೆ ಜಿಲ್ಲೆಯ ಜನರು ಇಟ್ಟುಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರ ಇಡೀ ಬಜೆಟ್ ಪ್ರತಿಯನ್ನು ಎಷ್ಟು ತಿರುವಿಹಾಕಿದರೂ ಸಿದ್ದು ಲೆಕ್ಕದಲ್ಲಿ ಬಾಗಲಕೋಟೆ ಪಾಲೆಷ್ಟು ಎನ್ನುವ ಗ್ಯಾರಂಟಿ ಅಂಕಿ ಅಂಶಗಳು ಕಾಣಿಸದೇ ತೀವ್ರ ನಿರಾಸೆಗೆ ಒಳಗಾಗುವಂತೆ ಮಾಡಿದೆ.

ಸಿದ್ದು ಕೊಟ್ಟಿದ್ದೇನು…?
ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಬಾದಾಮಿ ಬನಶಂಕರಿ ದೇವಸ್ಥಾನದ ಅಭಿವೃದ್ದಿ ಎಂದಿz್ದÁರೆ. ಆದರೆ, ಅದಕ್ಕೆ ಅನುದಾನ ಎಷ್ಟು ಎಂದು ಹೇಳಿಲ್ಲ. ಬಾದಾಮಿ ಗುಹೆಗಳಿಗೆ ರಾತ್ರಿ ಪ್ರವಾಸಿಗರು ಭೇಟಿ ನೀಡಲು ೩ಡಿ ಪ್ರೊಜೆಕ್ಷನï, ಮಲ್ಟಿ ಮಿಡಿಯಾ ಸೌಂಡï ಮತ್ತು ಲೈಟï ಶೋ ಯೋಜನೆ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದಕ್ಕೂ ಅನುದಾನ ಎಷ್ಟು ಎಂದು ತಿಳಿಸಿಲ್ಲ.
ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ಕ್ಕೆ ಹಂಚಿಕೆ ಆಗಿರುವ ೧೩೦ ಟಿಎಂಸಿ ನೀರಿನ ಬಳಕೆ ಯೋಜನಾ ಕಾಮಗಾರಿಗಳು ಹಾಗೂ ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣ ಆದ್ಯತೆ ನೀಡಿ ಶೀಘ್ರ ಯೋಜನೆ ಅನುಷ್ಠಾನಕ್ಕೆ ಕ್ರಮ ಎಂದಿದ್ದಾರೆ. ಆದರೆ, ಇದಕ್ಕಾಗಿ ಈ ಬಜೆಟ್ ನಲ್ಲಿ ಎಷ್ಟು ಅನುದಾನ ಒದಗಿಸಲಾಗುತ್ತದೆ ಎನ್ನುವುದನ್ನು ಹೇಳಿಲ್ಲ. ಯುಕೆಪಿ ೧ ಮತ್ತು ೨ರ ವಿಸ್ತರಣೆಗೆ ಕೇಂದ್ರದ ಸಹಾಯಕ ಧನ ಪಡೆಯಲು ಆದ್ಯತೆ ಎಂದು ತಿಳಿಸಿದ್ದಾರೆ.
ಹಾಗೆಯೇ ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ-ಶಿವಲಿಂಗೇಶ್ವರ ಮತ್ತು ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ೩೯೧೩೪ ಹೆಕ್ಟರ ಅಚ್ಚುಕಟ್ಟು ಸ್ಥಿರೀಕರಣ ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ, ಈ ಎಲ್ಲ ಯೋಜನೆಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದವು ಎನ್ನುವದು ಗಮನಾರ್ಹ. ಇನ್ನುಳಿದಂತೆ ಜಿಲ್ಲೆಗೆ ಯಾವುದೇ ಮಹತ್ವದ ಕೊಡುಗೆಯನ್ನು ಈ ಬಜೆಟ್‌ನಲ್ಲಿ ಕೊಟ್ಟಿಲ್ಲ. ಮೆಡಿಕಲ್ ಕಾಲೇಜ್ ಬಗ್ಗೆ ಕೊಟ್ಟದ್ದ ಭರವಸೆಯೂ ಠುಸ್ ಆಗಿದೆ.
ಉಳಿದಂತೆ ಈ ಹಿಂದೆ ತಾವು ಮೊದಲ ಸಲ ಸಿಎಂ ಆಗಿದ್ದಾಗ ಘೋಷಿಸಿದ್ದ ಯಾವುದೇ ಘೋಷಣೆಗಳಿಗೂ ಮರುಜೀವ ತುಂಬುವ ಕೆಲಸ ಮಾಡಿಲ್ಲ. ಬಾಗಲಕೋಟೆ-ಕುಡಚಿ ರೈಲು ಹಳಿ ನಿರ್ಮಾಣಕ್ಕೆ ಅಗತ್ಯ ಭೂಮಿ ಒದಗಿಸಲು ಅನುದಾನದ ಬಗ್ಗೆಯೂ ಪ್ರಸ್ತಾಪಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net