ಸಿಎಂ ಬಿಎಸ್​ವೈ ಬಜೆಟ್ ಜನಪ್ರಿಯತೆ ಹೆಚ್ಚಿಸಲು ಬಿಜೆಪಿ ಕಸರತ್ತು..!

Budget Lead
Published on

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ ಮಂಡನೆ ಮಾಡಿದ ಬಜೆಟ್, ಮಹಿಳೆಯರ, ರೈತರು ಮತ್ತು ಕಾರ್ಮಿಕರ ಪರವಾಗಿದ್ದು ಜನಪರವಾಗಿದೆ ಎಂದು ಬಿಂಬಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ.

ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಿದ ಬಳಿಕ ಒಬ್ಬೊಬ್ಬ ಸಚಿವರನ್ನು ಮಲ್ಲೇಶ್ವರದಲ್ಲಿ ಇರುವ ಬಿಜೆಪಿ ಕಚೇರಿಗೆ ಆಹ್ವಾನಿಸಿ ಸುದ್ದಿಗೋಷ್ಠಿ ಮಾಡಿಸುವ ಮೂಲಕ ಬಜೆಟ್ ಜನಪರ ಮತ್ತು ಜನಪ್ರಿಯವಾಗಿದೆ ಎಂದು ಬ್ಯಾಟಿಂಗ್ ಮಾಡಿಸುತ್ತಿದೆ.

ಆಯಾ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವರು, ಸುದ್ದಿಗೋಷ್ಠಿಯಲ್ಲಿ ಇಲಾಖೆ ಸಾಧನೆ ಪಟ್ಟಿ ಮಾಡಿ, ಯಡಿಯೂರಪ್ಪ ಅವರ ಬಜೆಟ್ ಬಗ್ಗೆ ಬಹುಪರಾಕ್ ಹಾಕುತ್ತಿದೆ.

ಪಕ್ಷದ ವೇದಿಕೆಗಳಲ್ಲಿ ಬಜೆಟ್ ಬಗ್ಗೆ ಬ್ಯಾಟಿಂಗ್ ಮಾಡಿ, ವಿರೋಧ ಪಕ್ಷಗಳ ಟೀಕೆಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿಯೂ ಬಜೆಟ್ ಸುದ್ದಿಗೋಷ್ಠಿಗಳು ಧಾರಾಳವಾಗಿ ನಡೆಯುತ್ತಿವೆ. ಆ ಮೂಲಕ ಜಿಪಂ, ತಾಪಂ ಚುನಾವಣೆಗೂ ವೇದಿಕೆ ಸೃಷ್ಟಿಸುವ ಪ್ರಯತ್ನವೂ ಸದ್ದಿಲ್ಲದೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net