

ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 8ನೇ ಆವೃತ್ತಿಯು ಮೊದಲ ವಾರ ಪೂರೈಸಿದ್ದು, ಎರಡನೇ ವಾರದ ಹೊಸ್ತಿಲಿಗೆ ಬಂದಿದೆ. ಕಳೆದ ವಾರ ಮನೆಯಿಂದ ಟಿಕ್ಟಾಕ್ ಸ್ಟಾರ್ ಧನುಶ್ರಿ ಹೊರಹೋಗಿದ್ದು, ಮುಂದಿನ ಬಾರಿ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿ ಯಾರೆಂಬ ಕುತೂಹಲ ಮೂಡಿದೆ.
ಧನುಶ್ರೀ ಅವರು ಒಂದು ವಾರ ಮಾತ್ರ ಬಿಗ್ಬಾಸ್ ಮನೆಯಲ್ಲಿದ್ದರು. ಹೀಗಾಗಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟಿರಬಹುದು? ಹಾಗೂ ಎಲ್ಲ ಸ್ಪರ್ಧಿಗಳಿಗೆ ಬಿಗ್ಬಾಸ್ನಿಂದ ಸಿಗುವ ಹಣವೆಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿರುತ್ತದೆ.
ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ವಾರದ ಆಧಾರದ ಮೇಲೆ ಸ್ಪರ್ಧಿಗಳಿಗೆ ಸಂಭಾವನೆ ನಿಗದಿಯಾಗಿರುತ್ತದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಮೊದಲ ವಾರ ಹೊರಬಂದ ಧನುಶ್ರೀ ಅವರಿಗೆ 40 ಸಾವಿರ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿರಿ: ಪ್ರೇಕ್ಷಾ ಆತ್ಮಹತ್ಯೆ ಕೇಸ್: ಲವ್ವರ್ ಜತೆಗಿನ ಸಂಭಾಷಣೆ ಆಡಿಯೋದಲ್ಲಿದೆ ಸ್ಫೋಟಕ ಮಾಹಿತಿ! ಇತರೆ ಸ್ಪರ್ಧಿಗಳು (ವಾರದ ಆಧಾರದಲ್ಲಿ)
ಇನ್ನು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಒಂದು ಎಪಿಸೋಡ್ಗೆ 12 ಲಕ್ಷ ರೂ. ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಕಳೆದ ಸೀಸನ್ಗೆ ಹೋಲಿಸಿದರೆ ಈ ಬಾರಿ ಸುದೀಪ್ ಅವರು ಅತಿ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.