ಇಂದು ಬೆಣ್ಣೆನಗರಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಾಸ್ತವ್ಯ

Bommai
Published on

ದಾವಣಗರೆ/ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆ ಬೆಣ್ಣೆನಗರಿ ದಾವಣಗೆರೆಗೆ ಪ್ರವಾಸ ಕೈಗೊಂಡಿದ್ದು, ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಇದ್ದಕ್ಕಿದ್ದಂತೆ ದಾವಣಗೆರೆಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಇಂದು ಸಂಜೆ 6 ಗಂಟೆಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಲಿರುವ ಸಿಎಂ, ರಾತ್ರಿ 9.30ಕ್ಕೆ ದಾವಣಗೆರೆ ತಲುಪಲಿದ್ದಾರೆ. ಅಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಒಡೆತನದ ಜಿಎಂ ಗೆಸ್ಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 10ಕ್ಕೆ ಚಿತ್ರದುರ್ಗ-ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ವಾಪಸ್ಸು ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಎಂ ಬೊಮ್ಮಾಯಿ ಅವರು ಈ ಸಮಯದಲ್ಲಿ ರಾಜ್ಯ ಕೇಂದ್ರಬಿಂದುವಾಗಿರುವ ದಾವಣಗೆರೆಗೆ ಹೊರಟಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಹಾವೇರಿ ಜಿಲ್ಲೆ ಹಾನಗಲ್‌ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ಶಕ್ತಿಕೇಂದ್ರವಾಗಲಿದೆಯಾ? ತವರು ಜಿಲ್ಲೆಯಲ್ಲಿ ಉಪಚುನಾವಣೆ ಪ್ರತಿಷ್ಠೆಯ ಕಣ ರಚನೆಯಾಗಿದ್ದು, ಅಲ್ಲಿನ ಗೆಲುವಿನ ರಣತಂತ್ರಕ್ಕೆ ಬೆಣ್ಣೆನಗರಿ ಸಾಕ್ಷಿಯಾಗಲಿದೆಯಾ? ಚುನಾವಣೆ ತಂತ್ರ ಮತ್ತು ಪ್ರತಿತಂತ್ರಗಳು ಇಲ್ಲಿ ರೂಪಗೊಳ್ಳಲಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ ಬಿಜೆಪಿ ಜನಪ್ರತಿನಿಧಿಗಳು ಮತ್ತು ಮುಖಂಡರು ಗುಟ್ಟು ಬಿಟ್ಟುಕೊಡುತ್ತಿಲ್ಲ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net