ಪೀಪಲ್ಸ್ ಪೊಲಿಟಿಕ್ಸ್ ನಮ್ಮದು ಎಂದ ಬೊಮ್ಮಾಯಿ

CM_Peoples
Published on

ತುಮಕೂರು: ಪವರ್ ಪೊಲಿಟಿಕ್ಸ್ ನಮ್ಮದಲ್ಲ. ಪೀಪಲ್ಸ್ ಪೊಲಿಟಿಕ್ಸ್ ನಮ್ಮದು... ಹೀಗೆಂದು ಸಿಎಂ ಬಸವರಾಜ ಬೊಮ್ಮಾಯಿ ಸ್ವಾತಂತ್ರೃ ನಂತರ 60 ವರ್ಷಕ್ಕೂ ಹೆಚ್ಚು ಆಳಿದ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸ್ಮಾರ್ಟ್‌ಸಿಟಿ ಯೋಜನೆ ಅಡಿ 600 ಕೋಟಿ ರೂ., ವೆಚ್ಚದಲ್ಲಿ ಕೈಗೊಂಡಿರುವ ಯೋಜನೆಗಳ ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ಅಧಿಕಾರವನ್ನು ದುರ್ಲಾಭಕ್ಕಾಗಿ ಬಳಸಿಕೊಂಡವರು ನಾವಲ್ಲ ಎಂದರು.

ಸ್ವಾತಂತ್ರೃ ಬಂದಾಗಿನಿಂದ ಇಷ್ಟು ವರ್ಷ ಜನರನ್ನು ಮರಳು ಮಾಡಿಕೊಂಡು ಬಂದಿದ್ದಾರೆ ವಿನಾಃ ಘೋಷಣೆ ಮಾಡಿದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳಿಸಿಲ್ಲ. ನಮ್ಮ ಡಬಲ್ ಇಂಜಿನ್ ಸರ್ಕಾರ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಜನರ ರಾಜಕಾರಣ ನಮ್ಮದು. ಜನರು ಶ್ರೀಮಂತರಾಗಬೇಕು ಹೊರತು ಸರ್ಕಾರಗಳು ಶ್ರೀಮಂತರಾಗುವುದಲ್ಲ. ದುಡಿಯುವ ವರ್ಗ ಶ್ರೀಮಂತರಾಗಬೇಕು. ದುಡಿಮೆಯೇ ದೊಡ್ಡಪ್ಪ ಆಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net