ಜನತೆಯ ಪ್ರತಿಯೊಂದು ಮತಕ್ಕೂ ಕಿಮ್ಮತ್ತಿದೆ: ಸಿಎಂ ಬೊಮ್ಮಾಯಿ

CM Bommai
Published on

ಚಿಕ್ಕೋಡಿ: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರು ತಮ್ಮ ಮಾತಿನ ಮೂಲಕ ಮತದಾರರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಜಯವಾಹಿನಿ ಹೆಸರಿನಲ್ಲಿ ರಾಜ್ಯಾಧ್ಯಂತ ಬಿರುಸಿನ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಕಾಂಗ್ರೆಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಮೀಸಲಾತಿ ಹೆಚ್ಚಳ ಮಾಡಲಿಲ್ಲ

ಇನ್ನು ಚಿಕ್ಕೋಡಿ ವಿಧಾನಸಬಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಪರ ರೋಡ್​ ಶೋ ನಡೆಸಿ ಮಾತನಾಡಿದ ಸಿಎಂ ಕಾಂಗ್ರೆಸ್‌ನವರು ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಮಾಡ್ತೀವಿ ಮಾಡ್ಯೀವಿ ಅಂತದ್ರೂ ಆದ್ರೆ ಅದು ಅವರ ಕೈಯಿಂದ ಆಗಲಿಲ್ಲ.

ಮೀಸಲಾತಿ ಹೆಚ್ಚಳಕ್ಕಾಗಿ ನಾನು ಬರಬೇಕಾಯಿತು ಹೀಗಾಗಿ ನೀವು ಕಾಂಗ್ರೆಸ್‌ಗೆ ಮತ ಹಾಕಬೇಡಿ. ಈ ಭಾಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ್ರು ತುಟಿ ಪಿಟಕ್ ಅನ್ನಲಿಲ್ಲ. ಕಾಂಗ್ರೆಸ್ ರೈತ ವಿರೋಧಿ ಪಕ್ಷವಾಗಿದೆ ಎಂದು ಆರೋಪಿಸಿದ್ದಾರೆ.

ಸಾಧ್ಯವಿದೆಯೇ

ಮೊನ್ನೆ ಬೆಳಗಾವಿಗೆ ಬಂದಾಗ ರಾಹುಲ್​ ಗಾಂಧಿ ಅಧಿಕಾರಕ್ಕೆ ಬಂದರೆ ಎರಡು ಸಾವಿರ ಯೂನಿಟ್​ ಉಚಿತ ವಿದ್ಯುತ್​ ಕೊಡುತ್ತೀವಿ ಎಂದು ಹೇಳಿದ್ದರು. ಅದು ಸಾಧ್ಯವಿದೆಯೇ ಕಾಂಗ್ರೆಸ್​ ಸುಳ್ಳಿನ ಗ್ಯಾರಂಟಿ ಕೊಡುತ್ತಾ ಇದೆ. ಚಿಕ್ಕೋಡಿ ಸಮಗ್ರ ಅಭಿವೃದ್ಧಿಯಾಗಬೇಕಂದ್ರೆ ಬಿಜೆಪಿಗೆ ಮತಹಾಕಿ ಎಂದು ವಿನಂತಿಸಿದ್ದಾರೆ.

Cm Bommai Campaign

ಕಿಮ್ಮತ್ತು ಇದೆ

ಪ್ರತಿಯೊಂದು ಮತಕ್ಕೆ ಕಿಮ್ಮತ್ತು ಇದೆ ಹಾಗೆಂದರೆ ಸ್ವಾಭಿಮಾನದ ಮತವಾಗಿದೆ. ಚಿಕ್ಕೋಡಿ ಜನತೆ ಸ್ವಾಭಿಮಾನಿಗಳು ದಕ್ಷ್ಯ ಆಡಳಿತಗಾರರಾದ ರಮೇಶ ಕತ್ತಿಗೆ ಟಿಕೆಟ್ ನೀಡಲಾಗಿದೆ.

ರೈತರಿಗೆ ಅತಿ ಹೆಚ್ಚು ಸಾಲ ನೀಡಿದ್ದು ಡಿಸಿಸಿ ಬ್ಯಾಂಕ್‌ನಿಂದ ಅದರ ಅಧ್ಯಕ್ಷ ರಮೇಶ ಕತ್ತಿಯಿಂದ ರೈತರಿಗೆ ಬಹಳ ಉಪಯೋಗವಾಗಿದೆ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.

ಮೊದಲ ಸ್ಥಾನ ಇರುತ್ತದೆ

ಒಳ್ಳೆಯ ಸಮಯದಲ್ಲಿ ನಾನು ಚಿಕ್ಕೋಡಿಗೆ ಬಂದಿದ್ದೇನೆ ಬೇಸಿಗೆ ಕಾಲದಲ್ಲಿ ಮಹಾರಾಷ್ಡ್ರದಿಂದ ನೀರು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ. ಈ ಕುರಿತು ಈಗಾಗಲೇ ಅಲ್ಲಿನ ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ.

ರೈತರು ಬೆಳೆಗಳಿಗೆ ಯೋಗ್ಯವಾದ ಬೆಲೆ ನೀಡುವುದು ನಮ್ಮ ಆದ್ಯತೆ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಹೆಚ್ಚಾಗಿ ಬೆಳೆಯಲಾಗುತ್ತದೆ ಸರ್ಕಾರದ ಪಟ್ಟಿಯಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿರುತ್ತದೆ ಎಂದು ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net