ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭ ಮಾರ್ಚ್ ನಲ್ಲಿ ಆಯೋಜನೆ

IMG-20240224-WA0061
Published on


ಕಲಬುರಗಿ: ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಮತ್ತು ಕಲಬುರಗಿಯಲ್ಲಿ ವಚನ ಮಂಟಪ ವಿಶ್ವವಿದ್ಯಾಲಯದ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿನಂದನಾ ಸಮಾರಂಭವನ್ನು ಮಾರ್ಚ್ ತಿಂಗಳಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಬಸವಾಭಿಮಾನಿ ಬಳಗದ ಸಂಚಾಲಕರಾದ ಸುರೇಶ ಪಾಟೀಲ್ ಜೋಗೂರ  ಮತ್ತು ಮಲ್ಲಿಕಾರ್ಜುನ ಗರೂರ ತಿಳಿಸಿದ್ದಾರೆ.
ಶೀಘ್ರದಲ್ಲಿ ಸಿಎಂ ಅವರ ಬಳಿ ನಿಯೋಗದೊಂದಿಗೆ ತೆರಳಿ ಬೆಂಗಳೂರಿನಲ್ಲಿ ಭೇಟಿ ಮಾಡಿ ದಿನಾಂಕ ಪಡೆದುಕೊಂಡು, ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜೋಗೂರ ತಿಳಿಸಿದ್ದಾರೆ. ಸಾಂಸ್ಕೃತಿಕ ನಾಯಕ  ಎಂದು ಘೋಷಿಸುವ ಮೂಲಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ಬಜೆಟನಲ್ಲಿ  ವಚನಗಳ ಅಧ್ಯಯನಕ್ಕಾಗಿ ವಿವಿಗಳಲ್ಲಿ  ಪೀಠಗಳ ಸ್ಥಾಪನೆ, ತತ್ವ ಪದಕಾರರ ಬಗ್ಗೆ ಅಧ್ಯಯನ ಮಾಡುವುದು ಇನ್ನಿತರ ಪ್ರಮುಖ ಅಂಶಗಳನ್ನು ಪ್ರಕಟಿಸಿರುವ ಸರ್ಕಾರ ಕ್ರಮ ಮಾದರಿಯಾಗಿದೆ ಎಂದು ಬಳಗದ ಶರಣು ಭೂಸನೂರ,ಚಂದ್ರಶೇಖರ ಪಾಟೀಲ್,ರಾಜು ಕೋಟೆ ಅಂಬರೀಶ ನೂಲಾ ಅಮರ ಕೊರಳ್ಳಿ ತಿಳಿಸಿದ್ದಾರೆ.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net