

ರಾಮನಗರ : ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುತ್ತಾರೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಬಿಜೆಪಿ-ಜೆಡಿಎಸ್ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚನ್ನಪಟ್ಟಣ ವಿಧಾಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಬೇವೂರು, ಸೋಲಾಗ, ಹೊಂಗನೂರು ಸೇರಿ ವಿವಿಧ ಕಡೆಗಳಲ್ಲಿ ಬುಧವಾರ ಪ್ರಚಾರ ನಡೆಸಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಮತ್ತು ಯುವ ಸಮುದಾಯ ಸ್ವಾವಲಂಬಿಗಳಾಗುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಸಶಕ್ತರಾಗಿದ್ದಾರೆ. ಶಕ್ತಿ ಯೋಜನೆಯಿಂದಾಗಿ ದೇವಾಲಯಕ್ಕೆ ಬರುವ ಮಹಿಳಾ ಭಕ್ತರ ಸಂಖ್ಯೆಯೂ ಹೆಚ್ಚಿದೆ ಎಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೇ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಹಾಸನಾಂಬೆ ದರ್ಶನಕ್ಕೆ ದಾಖಲೆಯ 21 ಲಕ್ಷ ಮಹಿಳೆಯರು ಭೇಟಿ ನೀಡಿದ್ದು, ಸುಮಾರು 12 ಕೋಟಿ ರೂ. ಆದಾಯ ಬಂದಿದೆ. ಇದಕ್ಕೆ ಕಾರಣ ಶಕ್ತಿ ಯೋಜನೆ. ಇದನ್ನು ಸಹಿಸಲಾಗದ ವಿಪಕ್ಷಗಳು ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಅಪಪ್ರಚಾರ ಮಾಡುತ್ತಿವೆ ಎಂದು ಸಿಎಂ ಟೀಕಿಸಿದರು.
ಕ್ಷೇತ್ರಕ್ಕೆ ಹಣ ಕೊಟ್ಟಿದ್ದು ಕಾಂಗ್ರೆಸ್ : ಚನ್ನಪಟ್ಟಣ ಕ್ಷೇತ್ರಕ್ಕೆ 220 ಕೋಟಿ ರೂ. ಅನುದಾನ ನೀಡುವುದಾಗಿ ೋಷಣೆ ಮಾಡಿ ಅನುಮೋದನೆಯನ್ನು ಕೊಟ್ಟು ಬಿಜೆಪಿ ಕೈ ತೊಳೆದುಕೊಂಡಿತ್ತು. ಆದರೆ ನಮ್ಮ ಸರ್ಕಾರ ಅಧಿಕಾಕ್ಕೆ ಬರುತ್ತಿದ್ದಂತೆ ನಾನು ಹಣವನ್ನು ಮಂಜೂರು ಮಾಡಿದೆ. ಅಲ್ಲದೆ, ಈಗಾಗಲೇ ಕ್ಷೇತ್ರಕ್ಕೆ 500 ಕೋಟಿ ರೂ. ನೀಡಿದ್ದು, ಯೋಗೇಶ್ವರ್ ಗೆಲುವಿನ ನಂತರ ಮತ್ತಷ್ಟು ಅನುದಾನ ಕೊಡುತ್ತೇವೆ. ನಮ್ಮ ಸರ್ಕಾರ ಇನ್ನೂ ಮೂರೂವರೆ ವರ್ಷ ಅಧಿಕಾರಿದಲ್ಲಿರುತ್ತದೆ. ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅಳುವುದು ಅವರ ಪರಂಪರೆ : ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ನಿಖಿಲ್ ಸೋತಿದ್ದರು. ಈಗ ಚನ್ನಪಟ್ಟಣಕ್ಕೆ ಕರೆದುಕೊಂಡು ಬಂದಿದ್ದಾರೆ. ‘ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ವಾಡು’ ಎಂದು ನಿಖಿಲ್‌ಗೆ ಕುಮಾರಸ್ವಾಮಿ ಹೇಳಿಕೊಟ್ಟಿದ್ದಾರೆ. ಸೋಲಿನ ಭಯ ಕಾಡುತ್ತಿದೆ. ಅದಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ವಾಜಿ ಪ್ರಧಾನಿ ದೇವೇಗೌಡರು ಮೂರ್ನಾಲ್ಕು ದಿನ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ. ಏನಾದ್ರೂ ವಾಡಿ ಮೊಮ್ಮಗನ್ನ ಗೆಲ್ಲಿಸಲೇಬೇಕೆಂದು ಹೊರಟಿದ್ದಾರೆ ಎಂದು ಸಿಎಂ ಟೀಕಿಸಿದರು.
ಯೋಗೇಶ್ವರ್‌ಗೆ ಜನರ ಕಷ್ಟ್ಟಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ವಾತಾಡೋದು, ಅಳೋದು ವಾತ್ರ ಗೊತ್ತು. ಚನ್ನಪಟ್ಟಣದ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು ಎಂದು ಸಿಎಂ ಕರೆ ನೀಡಿದರು.
ಯಾರೂ ಆಹ್ವಾನಿಸಿಲ್ಲ! : ನಮ್ಮನ್ನು ಯಾರೂ ರಾಜಕಾರಣಕ್ಕೆ ಬನ್ನಿ ಎಂದು ಆಹ್ವಾನ ನೀಡಲಿಲ್ಲ. ನಾವೇ ಬಂದಿದ್ದೇವೆ. ಜನರು ನಮ್ಮನ್ನು ಶಾಸಕರನ್ನಾಗಿ ಮಾಡಿದ್ದಾರೆ. ಅವರ ಸೇವೆ ಮಾಡುವುದು ನಮ್ಮ ಕೆಲಸ. ಇದಕ್ಕಾಗಿಯೇ 5 ಗ್ಯಾರಂಟಿಗಳನ್ನು ಕೊಟ್ಡಿದೀವಿ. ಪ್ರತಿ ತಿಂಗಳು ಎರಡು ಸಾವಿರ ದುಡ್ಡು ಕೊಡ್ತಿರೋದು ನಾವು. ಮಹಿಳೆಯರಿಗೆ ಫ್ರೀಯಾಗಿ ಬಸ್‌ನಲ್ಲಿ ಓಡಾಡೊ ಹಾಗೆ ವಾಡಿದ್ದು ನಮ್ಮ ಸರ್ಕಾರ. ಹಿಂದೆ ಕುವಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇದನ್ನು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈಗ ಕೂಲಿ ಕೇಳಲು ಬಂದಿದ್ದೇವೆ, ನಮಗೆ ನಿಮ್ಮ ಮತಗಳ ಮೂಲಕ ಆರ್ಶೀವಾದ ಮಾಡಿ ಎಂದು ಕೋರಿದರು. ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ ಎಂದರೂ ಕೇಂದ್ರ ಅಕ್ಕಿ ಕೊಡಲಿಲ್ಲ. ಈಗಲೂ ಅವರು ಅಕ್ಕಿ ಕೊಟ್ಟರೆ ಜನರಿಗೆ ಅಕ್ಕಿ ಕೊಡುತ್ತೇವೆ, ಇದರಿಂದ ಬಡವರಿಗೆ ಅನುಕೂಲ ಆಗುತ್ತದೆ.
ಎಂದು ಸಿದ್ದರಾಮಯ್ಯ ನುಡಿದರು.