ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟನೆ

kalika-1
Published on

ಕೊಕ್ಕರ್ಣೆ: ಮೊಗವೀರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಕ್ಕರ್ಣೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಜರುಗಿತು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಆರ್. ಅಧ್ಯಕ್ಷತೆ ವಹಿಸಿದ್ದರು. ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ ಪೂಜಾರಿ ಉದ್ಘಾಟಿಸಿದರು. ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ ಹಾಗೂ ಕಪ್ಪಣ್ಣ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರ ಆನಂದ ಮರಕಾಲ, ಅರ್ಚಕ ಕೃಷ್ಣ, ಬ್ರಹ್ಮಾವರ ತಾಲೂಕು ಮುಖ್ಯಶಿಕ್ಷಕ ಸಂಘ ಅಧ್ಯಕ್ಷ ಸಾಧು ಸೇರಿಗಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಉಪಾಧ್ಯಕ್ಷ ವನಿತಾ ಶೆಟ್ಟಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶೇಖರ ಮರಕಾಲ, ಹಳೇ ವಿದ್ಯಾರ್ಥಿ ಸುಧಾಕರ ಕೋಟ್ಯಾನ್, ಗ್ರಾಪಂ ಸದಸ್ಯರಾದ ವಸಂತ ಸೇರ್ವೆಗಾರ್, ಪಲ್ಲವಿ, ಸುನೀಲ್, ನಿವೃತ್ತ ಶಿಕ್ಷಕ ಲಕ್ಷ್ಮೀಕಾಂತ್ ಎ.ರಾವ್, ಟಿ.ಜಿ.ಟಿ.ಶಿಕ್ಷಕರ ಸಂಘ ಪ್ರತಿನಿಧಿ ಚೈತ್ರಾ, ನಿವೃತ್ತ ಫಾರೆಸ್ಟರ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

ಸಿ.ಆರ್.ಪಿ.ಪ್ರತಿಭಾ ಪ್ರಸ್ತಾವನೆಗೈದು, ಪ್ರಭಾರ ಮುಖ್ಯ ಶಿಕ್ಷಕ ಸುರೇಂದ್ರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ರಿತೇಶ್ ವಂದಿಸಿದರು ಸಹಶಿಕ್ಷಕಿ ಶಾರದಾ ನಿರೂಪಿಸಿದರು. ಅತಿಥಿ ಶಿಕ್ಷಕಿ ಮಾಲತಿ, ಗೌರವ ಶಿಕ್ಷಕಿ ದಿವ್ಯಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಹಳೇ ವಿದ್ಯಾರ್ಥಿಗಳು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net