ಹೊಸ ಬಟ್ಟೆ ಕದ್ದು ಹಳೇ ಬಟ್ಟೆಯ ಗಂಟು ಇಟ್ಟರು!

Theft
Published on

ದಾವಣಗೆರೆ: ಎಂತೆಂಥ ಕಳ್ಳರು ಇರ್ತಾರೆ ಗೊತ್ತಾ? ಟೈಲರ್ ಅಂಗಡಿ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಹೊಸ ಬಟ್ಟೆಯನ್ನು ದೋಚಿದ್ದಾರೆ. ಆದರೆ ಈ ಹೊಸ ಬಟ್ಟೆ ಇದ್ದ ಜಾಗದಲ್ಲಿ ಹಳೇ ಬಟ್ಟೆಯ ಗಂಟನ್ನು ಇಟ್ಟು ಹೋಗಿದ್ದಾರೆ!

ಜಗಳೂರು ಪಟ್ಟಣದ ಭುವನೇಶ್ವರಿ ವೃತ್ತದ ಸಾಯಿ ಟೈಲರ್ ಶಾಪ್‌ನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದೆ.

ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಟೈಲರ್ ಶಾಪ್‌ನಲ್ಲಿ 20ಕ್ಕೂ ಹೆಚ್ಚು ಜೊತೆ ಹೊಸ ಬಟ್ಟೆ ಕಳವಾಗಿದೆ. ಹಳೇ ಬಟ್ಟೆ ಗಂಟು ಇಟ್ಟಿರುವುದು ಅನುಮಾನ ಮೂಡಿಸಿದೆ ಎಂದು ಟೈಲರ್ ಸಿದ್ದೇಶ್ ಹೇಳಿದ್ದಾರೆ.

ಆಯುಧಪೂಜೆ-ವಿಜಯದಶಮಿ ಪ್ರಯುಕ್ತ ಹೊಲಿಗೆ ಹಾಕಲೆಂದು ಗ್ರಾಹಕರು ಸಾಕಷ್ಟು ಪ್ರಮಾಣದಲ್ಲಿ ಬಟ್ಟೆಗಳನ್ನು ಕೊಟ್ಟಿದ್ದರು. ಇಂದು-ನಾಳೆಯೊಳಗೆ ಬಹುತೇಕ ಬಟ್ಟೆಗಳನ್ನು ಡೆಲಿವರಿ ಮಾಡಬೇಕಿತ್ತು. ಅಷ್ಟರಲ್ಲಿ ಕಳ್ಳತನ ನಡೆದಿದ್ದು, ಟೈಲರ್​ಗೆ ದಿಕ್ಕು ತೋಚದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net