ವ್ಯಾಪಾರಿಯ ಸೋಗಲ್ಲಿ ಬಂದರು, ಅಂಗಡಿ ಮಾಲೀಕನನ್ನೇ ಕೊಂದರು; ಗುಂಡಿಕ್ಕಿ ಸಾಯಿಸಿದ್ರು ಸುಪಾರಿ ಕಿಲ್ಲರ್ಸ್​

Shootout
ಹತ್ಯೆಗೀಡಾಗಿರುವ ಮೂಲಸಿಂಗ್ ಮಾಲೀಕತ್ವದ ಬಟ್ಟೆ ಅಂಗಡಿ
Published on

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ರಾತ್ರಿ ಹೊತ್ತು ಗುಂಡಿನ ಸದ್ದು ಕೇಳಿಬಂದಿದ್ದು ವ್ಯಾಪಾರಿಯೊಬ್ಬರನ್ನು ಬಲಿ ಪಡೆದಿದೆ. ವರ್ತಕರ ಸೋಗಿನಲ್ಲಿ ಬಂದಿದ್ದ ಸುಪಾರಿ ಕಿಲ್ಲರ್ಸ್​ ಅಂಗಡಿ ಮಾಲೀಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಹೊಳಲ್ಕೆರೆಯ ಪ್ರಿಯದರ್ಶಿನಿ ಬಟ್ಟೆ ಅಂಗಡಿ ಮಾಲೀಕ ಮೂಲಸಿಂಗ್ ಕೊಲೆಗೀಡಾದ ವ್ಯಕ್ತಿ. ದುಷ್ಕರ್ಮಿಗಳು ಬಟ್ಟೆ ಮಾರಾಟ ಮಾಡುವ ಸೋಗಿನಲ್ಲಿ ಆಗಮಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಂಗಡಿ ಮುಂದೆ ಪ್ರಯೋಗಿಸಲಾದ ಗುಂಡಿನೇಟಿಗೆ ಮೂಲಸಿಂಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಹೊಳಲ್ಕೆರೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶೂಟೌಟ್ ಪ್ರಕರಣದಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಉಳಿದ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net