ನಾಗರ ಪಂಚಮಿ ಹಬ್ಬದ ನಿಮಿತ್ತ ಸ್ಲಂ ಮಕ್ಕಳಿಗೆ ಹೊಸ ಬಟ್ಟೆ ವಿತರಿಸಿ ಸಂಭ್ರಮ ಹೆಚ್ಚಿಸಿದ ಕುಲಕರ್ಣಿ ಕಂದಗೋಳ

IMG-20230820-WA0040(1)
Published on


ಕಲಬುರಗಿ : ನಾಡಿಗೆಲ್ಲ ದೊಡ್ಡ ಹಬ್ಬ ಎಂದು ಕರೆಸಿಕೊಳ್ಳುವ ನಾಗರ ಪಂಚಮಿ ಹಬ್ಬದ ನಿಮಿತ್ತವಾಗಿ ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಮತೀರ್ಥ ಬಳಿಯ ಸ್ಲಂ ಪ್ರದೇಶದಲ್ಲಿ ವಾಸವಾಗಿರುವ  ಬಡ ಮಕ್ಕಳಿಗೆ ಮತ್ತು ಅಲ್ಲಿನ ನಿವಾಸಿಗಳಿಗೆ ಸದ್ಗುರು ಶಿವರಣಾನಂದ ಏಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು  ಎಲೆ ನಾವದಗಿಯ ಕಾಯಕ ಯೋಗಿ ಸೇವಾ ಸಂಸ್ಥೆಯ  ವತಿಯಿಂದ  ಹೊಸ ಬಟ್ಟೆಗಳನ್ನು ವಿತರಿಸಿದರು. ಈ ಮೂಲಕ ಕೊಳಗೇರಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸುವುದರ ಜತೆಗೆ ಹಬ್ಬದ  ಸಂಭ್ರಮ ಅನುಭವಿಸುವಂತೆ ಮಾಡಿದರು.
ಹಬ್ಬದ ಮುನ್ನಾ ದಿನವಾದ ಕೊಳಗೇರಿಗೆ ಉಭಯ ಸಂಸ್ಥೆಯವರು ಅಲ್ಲಿಗೆ ಭೇಟಿ ನೀಡಿದಾಗ ಮಕ್ಕಳು ಹಳೆಯ ಮಾಸಿದ ಬಟ್ಟೆಗಳನ್ನು ಹಾಕಿಕೊಂಡಿರುವುದನ್ನು ಗಮನಿಸಿ.  ಅವರು ಹೊಸ ಬಟ್ಟೆ ಇಲ್ಲದಿದ್ದರೆ ಹಬ್ಬದ ಸಂಭ್ರಮಪಡುವುದಿಲ್ಲ  ಎಂಬುದು ಅರಿತುಕೊಂಡು, ಕೂಡಲೇ ಹೊಸ ಬಟ್ಟೆಗಳನ್ನು ಖರೀದಿಸಿ ತಂದು ಮಕ್ಕಳಿಗೆ ವಿತರಿಸುವ ಮೂಲಕ ಎರಡು ಸಂಸ್ಥೆಯರು ಮಾನವೀಯತೆ ಮೆರೆದು, ಸಮಾಜಕ್ಕೆ ಮಾದರಿಯಾದ ಕೆಲಸ ಮಾಡಿದರು.
ಹಬ್ಬದ ಮುನ್ನಾ ದಿನವಾದ ಭಾನುವಾರ ಕಾಯಕ ಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷ  ಕೇದಾರನಾಥ ಕುಲಕರ್ಣಿ ಮತ್ತು ಸದ್ಗುರು ಶಿವರಣಾನಂದ ಏಜುಕೇಷನ್  ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ  ಶರಣಬಸಪ್ಪ.ಆರ್.ಕಂದಗೋಳ  ಅವರು ವಿತರಿಸಿದರು. ಅಲ್ಲದೆ ಮಕ್ಕಳಿಗೆ ಸಿಹಿ ತಿಂಡಿಗಳ ಪೊಟ್ಟಣಗಳನ್ನು ವಿತರಿಸಿದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net