ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು

Kailancha-Ph-01-Hunasanahalli Road Gundi Samsye - Ready - 15-3-2025
Published on

ಕೂನಗಲ್ ಗ್ರಾಪಂ ಅಧ್ಯಕ್ಷ, ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಕೈಲಾಂಚ

ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದ ಬಳಿಯ ಕೂನಗಲ್ ರಸ್ತೆ ಮಧ್ಯದ ಗುಂಡಿಗಳನ್ನು ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕೂನಗಲ್ ರಸ್ತೆ ಮಧ್ಯೆ ಗುಂಡಿ ಬಿದ್ದು, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿತ್ತು. ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದ ಪರಿಣಾಮ ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರಾದಿಯಾಗಿ ಅಧಿಕಾರಿ, ಸಿಬ್ಬಂದಿ ಗುಂಡಿ ಮುಚ್ಚಿಸಲು ನೆರವಾದರು.

ಹುಣಸನಹಳ್ಳಿ-ರಾಮನಗರ ರಸ್ತೆಯಲ್ಲಿ ಸದಾ ವಾಹನ, ಜನ ಸಂಚಾರವಿರುತ್ತದೆ. ಗ್ರಾಪಂ ಕಚೇರಿಗೆ ಹೊಂದಿಕೊಂಡಂತೆ ರಸ್ತೆ ಮಧ್ಯೆ ಕಂದಕ ನಿರ್ಮಾಣವಾಗಿತ್ತು. ರಸ್ತೆ ಗುಳಿ ಬಿದ್ದು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಗೆ ತಿಳಿಸಿದರೂ ಸಮಸ್ಯೆ ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ. ಇಲಾಖೆ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ನಿಂತು ಸಿಮೆಂಟ್, ಜಲ್ಲಿ ಮೂಲಕ ರಸ್ತೆಯಲ್ಲಿ ಗುಂಡಿ ಮುಚ್ಚಿ, ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪಿಡಿಒ ಬಿ.ಪಿ.ಕುಮಾರ್, ಬಿಲ್ ಕಲೆಕ್ಟರ್ ರಾಜೇಶ್, ಸಿಬ್ಬಂದಿ ಉಮೇಶ್, ನಿಂಗರಾಜು, ಅರಣ್‌ಕುಮಾರ್, ಜಯಲಕ್ಷ್ಮಮ್ಮ, ಗೋಪಾಲ್, ಸಾವಿತ್ರಮ್ಮ, ಸಂತೋಷ್, ಮರಿಸಿದ್ದಯ್ಯ, ಈಶ್ವರಯ್ಯ ಇದ್ದರು.

ಹುಣಸನಹಳ್ಳಿ ರಸ್ತೆ ಮಧ್ಯದ ಸೇತುವೆಯಲ್ಲಿ ಗುಂಡಿಗಳು ಬಿದ್ದು ವರ್ಷಗಳೇ ಕಳೆದಿದ್ದವು. ಸಮಸ್ಯೆ ಬಗೆಹರಿಸುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಿ ಸಾಕಾಗಿತ್ತು. ಇಲಾಖೆಗೆ ಕಣ್ಣು, ಕಿವಿ ಕೇಳಿಸದ ಕಾರಣ ಗ್ರಾಪಂನ ಪಿಡಿಒ ಸೇರಿ ಅಧಿಕಾರಿಗಳು, ಸಿಬ್ಬಂದಿಯೇ ಸಿಮೆಂಟ್, ಜಲ್ಲಿ ಹಾಕಿ ಗುಂಡಿ ಮುಚ್ಚಲಾಗಿದೆ.

ಪುಟ್ಟಸ್ವಾಮಿ

ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net