ಕಟ್ಟಡ ಸಾಮಗ್ರಿ, ಪೆಟ್ಟಿ ಅಂಗಡಿ ತೆರವುಗೊಳಿಸಿ: ಗುತ್ತಿಗೆದಾರರಿಗೆ ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಸೂಚನೆ

truk
Published on

ಬೆಂಗಳೂರು: ಯಶವಂತಪುರದ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಆವರಣದಲ್ಲಿ ನಿಯಮಬಾಹಿರವಾಗಿ ದಾಸ್ತಾನು ಮಾಡಿಕೊಂಡಿರುವ ಮರಳು, ಜಿಲ್ಲಿ, ಇಟ್ಟಿಗೆ ಸೇರಿ ಕಟ್ಟಡ ಸಾಮಗ್ರಿ, ಪೆಟ್ಟಿ ಅಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಗುತ್ತಿಗೆದಾರರಿಗೆ, ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿ. ಸೂಚಿಸಿದೆ.

ಟ್ರಕ್ ಟರ್ಮಿನಲ್‌ನಲ್ಲಿ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು, ಅನ್ಯ ಕಾರ್ಯಗಳಿಗೆ ಸ್ಥಳವನ್ನು ಬಳಸಿಕೊಂಡಿರುವುದು, ಪೆಟ್ಟಿ ಅಂಗಡಿ ತೆರೆದಿರುವುದು ಹಾಗೂ ಮರಳು, ಜಿಲ್ಲಿ, ಇಟ್ಟಿಗೆ ಸೇರಿ ಕಟ್ಟಡ ಸಾಮಗ್ರಿ ದಾಸ್ತಾನು ಹಾಕಿರುವ ಕಾರಣ ಸುಗಮವಾಗಿ ಲಾರಿಗಳ ನಿಲುಗಡೆ ತೊಂದರೆಯಾಗುತ್ತಿದೆ ಎಂದು ಲಾರಿ ಓನರ್ಸ್ ಅಸೋಸಿಯೇಷನ್ ಸಂಘ ಸೇರಿ ಸಾರ್ವಜನಿಕರು, ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ಪೆಟ್ಟಿ ಅಂಗಡಿ, ಕಟ್ಟಡ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ, ಯಾವುದೇ ಸೂಚನೆ ನೀಡದೆ ತೆರವುಗೊಳಿಸಲಾಗುವುದು,ಭೂ ಅತಿಕ್ರಮಣ ಸೇರಿ ಇತರೆ ಕಾಯ್ದೆ ಅಡಿ ಕೇಸ್ ದಾಖಲಿಸುವುದಾಗಿ ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನ ವ್ಯವಸ್ಥಾಪಕ ನಿರ್ದೇಶಕರು, ಗುತ್ತಿಗೆದಾರ ಜಿ. ಕೃಷ್ಣಪ್ಪಗೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net