ಮಹಾಂಕಾಳೇಶ್ವರಿ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ

IMG-20240928-WA0089
Published on

ಪಾಂಡವಪುರ: ಪುರಸಭೆ ವತಿಯಿಂದ ಸಚ್ಛತೆಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಮಹಾಂಕಾಳೇಶ್ವರಿ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಶುಕ್ರವಾರ ನಡೆಯಿತು.


ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಧ್ಯೇಯವಾಕ್ಯದೊಂದಿಗೆ ಜಾಥಾ ಮೂಲಕ ಪೇಟೆಬೀದಿ, ಮಹಾಂಕಾಳೇಶ್ವರಿ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಸ್ವಚ್ಛತೆ ಹಾಗೂ ಸ್ವಚ್ಛತೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಕುರಿತು ಪುರಸಭೆ ಅಧಿಕಾರಿಗಳು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಮುಖ್ಯಾಧಿಕಾರಿ ಸತೀಶಕುಮಾರ್, ಪರಿಸರ ಇಂಜಿನಿಯರ್ ಎಂ.ಜಿ.ಶಫಿನಾಜ್, ಆರೋಗ್ಯ ನಿರೀಕ್ಷಕ ಮೂರ್ತಿ, ಆರ್ಮುಗಂ, ಸದಾಶಿವ, ವೆಂಕಟೇಶ, ನಾಗರಾಜ , ರಮೇಶ, ಮಧುಸೂದನ್, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net