

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಸಹಯೋಗದೊಂದಿಗೆ 227ನೇ ವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಕೋಟತಟ್ಟು ಪಡುಕರೆ ಗದ್ದೆ ದುರ್ಗಾಪರಮೇಶ್ವರಿ ದೇಗುಲವನ್ನು ಸ್ವಚ್ಛಗೊಳಿಸಲಾಯಿತು. ದೇಗುಲದ ಮೊಕ್ತೇಸರ ನಾಗರಾಜ್ ಕಾರಂತ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜತಾ ಬಾಯರಿ, ಉಪಾಧ್ಯಕ್ಷೆ ಪುಷ್ಪಾ ಕೆ.ಹಂದಟ್ಟು, ಕಾರ್ಯದರ್ಶಿ ವಸಂತಿ, ಜೆಸಿಐ ಸೀನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.