ಸಮಾಜದ ಒಳಿತಿಗೆ ಶ್ರಮ

NSS
ತೆಂಕ ಎರ್ಮಾಳಿನಲ್ಲಿ ನಡೆದ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಎರ್ಮಾಳು ಬೀಡು ಅಶೋಕ್ ರಾಜ್ ಅವರನ್ನು ಸನ್ಮಾನಿಸಲಾಯಿತು.
Published on

ಪಡುಬಿದ್ರಿ: ಮನುಷ್ಯ ಸ್ವಾರ್ಥವನ್ನು ಮಾತ್ರ ಚಿಂತಿಸುತ್ತ ಇದ್ದರೆ ಬದುಕು ಹಸನಾಗದು. ಅವನು ಸಮಾಜದ ಒಳಿತಿಗೆ ಶ್ರಮಿಸಬೇಕು ಅದನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಲು ರಾಷ್ಟ್ರೀಯ ಸೇವಾಯೋಜನೆ ಶಿಬಿರಗಳು ಪೂರಕ ಎಂದು ಎರ್ಮಾಳು ಬೀಡು ಅಶೋಕ್ ರಾಜ್ ಹೇಳಿದರು.
ಎರ್ಮಾಳು ತೆಂಕ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಎರ್ಮಾಳು ಬೀಡು ಅಶೋಕ್‌ರಾಜ್ ಹಾಗೂ ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಯೋಗ ಗುರು ರಂಜಿತ್ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು. ಬಿಂದು, ಮನೀಶ್, ಆನ್ನ, ಮಂಥನ್ ಅನುಭವ ಹಂಚಿಕೊಂಡರು. ಉತ್ತಮ ಶಿಬಿರಾರ್ಥಿ ಮನೀಶ್, ಮನ್ವಿತ್, ಗಾಳಿಪಟ ತಯಾರಿಸಿದ ಇರ್ಫಾನ್, ಮರಳುಶಿಲ್ಪ ರಚಿಸಿದ ಪ್ರಥಮ್, ಹರ್ಷ ಹಾಗೂ ಮಂಥನ್ ಅವರಿಗೆ ಬಹುಮಾನ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ಸ್ಮರಣಿಕೆ ವಿತರಿಸಲಾಯಿತು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಪ್ರಶಾಂತ ಹೊಳ್ಳ, ಅದಮಾರು ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ ಉಪಸ್ಥಿತರಿದ್ದರು. ಪ್ರತೀಕ್ಷಾ ಸ್ವಾಗತಿಸಿ, ನಿತೀಶಾ ಕಾರ್ಯಕ್ರಮ ನಿರೂಪಿಸಿದರು. ಜಯಶಂಕರ ಕಂಗಣ್ಣಾರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net