ಸಮುದಾಯ ಭವನ, ಅಂಗನವಾಡಿ ಆವರಣ ಸ್ವಚ್ಛತೆ

ಸಮುದಾಯ ಭವನ, ಅಂಗನವಾಡಿ ಆವರಣ ಸ್ವಚ್ಛತೆ
Published on

ನಾಪೋಕ್ಲು: ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ಧರ್ಮಸ್ಥಳ ಮತ್ತು ವಾಟೆ ಕಾಡು ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಸಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವಾಟೆಕಾಡು ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರದ ಪರಿಸರವನ್ನು ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ ಮಾಡಲಾಯಿತು.

ಈ ಸೇವಾ ಕಾರ್ಯದಲ್ಲಿ ಶ್ರೀ ವ್ನಿೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಚ್.ಜೆ. ಶರಣು, ಕಾರ್ಯದರ್ಶಿ ಅಭಿ, ಎಚ್.ಜೆ. ಗಣೇಶ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳಾದ ಸರಸ್ವತಿ, ಸುಮ್ಮಿ, ಸೀತೆ, ರಂಜು, ರೂಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net