

ಕಿನ್ನಿಗೋಳಿ: ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ ರೂಪಿಸುವ ಪ್ರಜೆಗಳು, ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳು ಸಮಾಜಕ್ಕೆ ತಿಳಿಹೇಳಿ ಮಾದರಿಯಾಗಬೇಕು ಎಂದು ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಕೇಶವ ಪಾಟಾಳಿ ಹೇಳಿದರು.
ಎಂ.ಆರ್.ಪಿ.ಎಲ್ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಾವೂರು ಸಹಯೋಗದೊಂದಿಗೆ ಎಂ.ಆರ್.ಪಿ.ಎಲ್ ಸ್ವಚ್ಛತಾ ಪಕ್ವಾಡದ ಅಂಗವಾಗಿ ಸ್ವಚ್ಛತಾ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛತೆ ಎಂಬುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂ.ಆರ್.ಪಿ.ಎಲ್ ಸಂಸ್ಥೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿದ್ದು, ಮಾತ್ರವಲ್ಲದೆ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಕೆಲಸ ನಿರಂತರ ಮಾಡುತ್ತಿದೆ ಎಂದರು.
ಕಾವೂರು ಪ್ರಥಮ ದರ್ಜೆ ಕಾಲೇಜಿನಿಂದ ಕಾವೂರು ಜಂಕ್ಷನ್‌ವರೆಗೆ ವಿವಿಧ ಘೋಷಣೆಯೊಂದಿಗೆ ಜಾಥಾ ನಂತರ ಸ್ವಚ್ಛತೆ ಬಗೆಗಿನ ಬೀದಿನಾಟಕ ನಡೆಯಿತು. ಎಂ.ಆರ್.ಪಿ.ಎಲ್ ಹರೀಶ್ ರಾವ್, ಶಾಲಾ ಪ್ರಾಂಶುಪಾಲೆ ಮಮತಾ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.