

ಸುಂಟಿಕೊಪ್ಪ:ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಚಾಲನೆ ನೀಡಿದರು.
ಮಾದಾಪುರ ಗ್ರಾಮ ಪಂಚಾಯಿತಿ, ಮಾದಾಪುರ ಆಯುಧ ಪೂಜಾ ಸಮಿತಿ, ಎಸ್‌ಜೆಎಂ ವಿದ್ಯಾಸಂಸ್ಥೆ, ಮುಕೋಡ್ಲು ವ್ಯಾಲಿಯೂ ಕಲ್ಚರಲ್ ಅಸೋಸಿಯೇಷನ್ ಸಹಯೋಗದಲ್ಲಿ ಮಾದಾಪುರ ರಾಜ್ಯ ಹೆದ್ದಾರಿ ಬಳಿಯ ರಸ್ತೆ ಬದಿಯಲ್ಲಿ ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಡುವಂಡ ಜಾಲಿ ಸೋಮಣ್ಣ, ಸದಸ್ಯರಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕೃಷ್ಣನ್‌ನಾಯಕ್, ಸಿಬ್ಬಂದಿ ರವೀಂದ್ರ, ಪ್ರೀತಿ, ಗಣೇಶ, ಲೆಕ್ಕಾಧಿಕಾರಿ ಅನಿತಾ, ಆಯುಧಪೂಜಾ ಆಚರಣಾ ಸಮಿತಿ ಅಧ್ಯಕ್ಷ ಕುಮಾರ, ಮಧು, ಶರಣು, ಮನು, ಹಂಚೆಟ್ಟಿರ ಮನುಮುದ್ದಪ್ಪ ಇತರರು ಇದ್ದರು.