

ದೇವದುರ್ಗ: ಮನೆ, ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು. ಹೀಗಾಗಿ ಜನರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಇದನ್ನೂ ಓದಿ: ಸ್ವಚ್ಛ ಪರಿಸರದ ಸಿಂಗಾಪುರವೆಂಬ ಸ್ವರ್ಗ
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಡೆಂಘೆ ನಿಯಂತ್ರಣ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ನಿಂತ ಸ್ವಚ್ಛ ನೀರಲ್ಲೂ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ. ಹೀಗಾಗಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ.
ಆಧುನಿಕ ಬದುಕಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ನಮ್ಮ ಅರಿವಿನ ಪರಿವಿಗೆ ಬಾರದಂತ ಕಡೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೂವಿನ ಕುಂಡಗಳು, ಬಿಸಾಡಿದ ಹಳೆಯ ಪಾತ್ರೆ, ಮಡಕೆ, ಟೈರ್, ಬಕೆಟ್, ಪ್ಲಾಸ್ಟಿಕ್ ಕಪ್, ಎಳೆನೀರಿನ ಚಿಪ್ಪು ಸೇರಿ ವಿವಿಧ ನೀರು ನಿಲ್ಲುವ ಸ್ಥಳದಲ್ಲಿ ಸೊಳ್ಳೆಗಳು ಸಹಜವಾಗಿ ಬೆಳೆಯುತ್ತವೆ. ಈ ವಿಷಯದ ಬಗ್ಗೆ ಸಾಂಘಿಕ ಅರಿವು ಅಗತ್ಯ. ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ವೈದ್ಯಾಧಿಕಾರಿ ತ್ಯಾಗರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಪ್ರಮುಖರಾದ ಚನ್ನಬಸಯ್ಯ ಹಿರೇಮಠ, ಬಿಎಚ್‌ಇಒ ಗೀತಮ್ಮ, ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕರ್, ಸುದೀಪ್ ಕುಮಾರ್, ರಮೇಶ್, ಬಾಬುರಾವ್, ರಾಚನಗೌಡ, ಶರಣಬಸವ, ಬೀರಪ್ಪ, ಉಬೆದ್, ಮಲ್ಲಿಕಾರ್ಜುನ, ಆಶಾ ಕಾರ್ಯಕರ್ತೆಯರಾದ ಶಿವಗಂಗಾ, ಶಾಂತಮ್ಮ, ನಾಗಮ್ಮ, ತಾಯಮ್ಮ, ರಹಿಮುನ್ನಿಸಾ ಬೇಗಂ, ಶಬೀನಾ ಬಾನು, ಮಹ್ಮದಿ, ಭೀಮಮ್ಮ, ರೇಣುಕಾ, ಸುಜಾತಾ, ಶ್ರುತಿ, ದೀಪಾ ಇತರರಿದ್ದರು.