ಸುಂಟಿಕೊಪ್ಪದಲ್ಲಿ ಸ್ವಚ್ಛ ಅಭಿಯಾನ

15sunti01
Published on

ಸುಂಟಿಕೊಪ್ಪ: ಸ್ವಚ್ಛ ಕೊಡಗು -ಸುಂದರ ಕೊಡಗು ಅಭಿಯಾನದ ಅಂಗವಾಗಿ ಪಟ್ಟಣದ ಗದ್ದೆಹಳ್ಳದ ಮಹಾತ್ಮಗಾಂಧಿ ವೃತ್ತದಿಂದ ಸುಂಟಿಕೊಪ್ಪದ ಅಯ್ಯಪ್ಪ ದೇವಸ್ಥಾನದವರೆಗೆ ಸ್ವಚ್ಛತೆ ಮಾಡಲಾಯಿತು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ಹೋಟೆಲ್ ಮಾಲೀಕರ ಹಾಗೂ ಹೋಂಸ್ಟೇ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಹಾಗೂ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ದಿನೇಶ್ ಅಭಿಯಾನಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಪ್ಲಾಸ್ಟಿಕ್, ತ್ಯಾಜ್ಯ, ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಎ.ಶಬೀರ್, ಎಚ್.ಯು.ರಫೀಕ್ ಖಾನ್, ಕೆ.ಎಂ.ಆಲಿಕುಟ್ಟಿ, ಎಂ.ಎಸ್.ಜಿನಾಷುದ್ದೀನ್, ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಮಾಜಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಮಾಜಿ ಸದಸ್ಯ ಹನೀಫ್, ಪಂಚಾಯಿತಿ ಸಿಬ್ಬಂದಿ ಚಂದ್ರಕಲಾ, ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಹಾಗೂ ಗ್ರಾಮದ ಮುಖಂಡ ಇಸಾಕ್‌ಖಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net