ನಲವತ್ತೋಕ್ಲು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ

5 gkp 02
ನಲ್ವತ್ತೋಕ್ಲು ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ಯುವಕರ ತಂಡ
Published on

ಗೋಣಿಕೊಪ್ಪ: ಈದ್ ಮಿಲಾದ್ ಪ್ರಯುಕ್ತ ನಲವತ್ತೋಕ್ಲು ಗ್ರಾಮದ ಯುವಕರ ತಂಡ ಗ್ರಾಮದ ಮುಖ್ಯರಸ್ತೆಗಳಲ್ಲಿ ಗುರುವಾರ ಸ್ವಚ್ಛತಾ ಕಾರ್ಯ ನಡೆಸಿದರು.

ನಲುವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎ. ಹನೀಫ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಚ್ಛತೆಗೆ ಇಂದು ಮೊದಲ ಆದ್ಯತೆ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಸ್ವಚ್ಛತೆಯ ಕುರಿತು ಸ್ವಯಂ ಪ್ರೇರಣೆಯ ಅರಿವು ಮೂಡಬೇಕು. ಹೀಗಾದಲ್ಲಿ ಮಾತ್ರ ಸ್ವಚ್ಛತೆಯ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಬಳಿಕ ಗ್ರಾಮದ ಯುವಕರ ತಂಡ ಈದ್ ಮಿಲಾದ್ ಮೆರವಣಿಗೆ ಸಂಚರಿಸುವ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿತು. ಅಲ್ಲದೆ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕುರಿತು ಅರಿವು ಮೂಡಿಸುವ ಕರ ಪತ್ರವನ್ನು ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net