

ಬಂಟ್ವಾಳ: ಚೆನ್ನೈತೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶೌಚಗೃಹದ ನೀರಿನ ವ್ಯವಸ್ಥೆಗೆ ಸಮಸ್ಯೆಯಾಗಿದ್ದು, ಶೌಚಗೃಹದ ಪೈಪ್ಲೈನ್ ಕೆಲಸ ಮಾಡಲು ಶಾಲಾ ಮುಖ್ಯಶಿಕ್ಷಕರು ಶೌರ್ಯ ಘಟಕಕ್ಕೆ ಮನವಿ ಮಾಡಿದಾಗ ವಾಮದಪದವು ಶೌರ್ಯ ವಿಪತ್ತು ನಿರ್ವಹಣಾ ಘಟಕ ತುರ್ತು ಸ್ಪಂದಿಸಿ ಶ್ರಮದಾನ ಸೇವೆ ಮೂಲಕ ದುರಸ್ತಿ ಮಾಡಿಕೊಟ್ಟರು. ಅಂಗನವಾಡಿ, ಶಾಲಾ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು.
ಇರ್ವತ್ತೂರು ಸೇವಾ ಪ್ರತಿನಿಧಿ ಭಾರತಿ, ಕೊಡಂಬೆಟ್ಟು ಸೇವಾ ಪ್ರತಿನಿಧಿ ಮೋಹನ್ ದಾಸ್ ಗಟ್ಟಿ, ಶೌರ್ಯ ಘಟಕ ಸದಸ್ಯರಾದ ಪ್ರಕಾಶ್, ಮಾಧವ, ಚೇತನ್, ರಾಜೇಶ್, ಯಶೋಧರ, ತಾರಾನಾಥ್, ಗಿರೀಶ್, ದನವತಿ, ಸುರೇಶ ಭಾಗವಹಿಸಿದ್ದರು.