‘ಸ್ವಚ್ಛ ಮರವಂತೆ ಅಭಿಯಾನ’ ಮಾದರಿ

gan (7)
Published on

ಕುಂದಾಪುರ: ಮರವಂತೆ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಸ್ವಚ್ಛ ಮರವಂತೆ ಅಭಿಯಾನ ಒಳ್ಳೆಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಎಲ್ಲ ಗ್ರಾಮ ಪಂಚಯಿತಿಗಳಿಗೂ ಮಾದರಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಮರವಂತೆ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಆರಂಭಿಸಿರುವ ಸ್ವಚ್ಛ ಮರವಂತೆ- ಸುಂದರ ಮರವಂತೆ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದಂತೆ ಜಾಗೃತಿ ಮೂಡಿಸುವ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಪಟಗಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಾ ಪೂಜಾರಿ, ಭವಿತ್, ಎಸ್‌ಆರ್‌ಎಲ್‌ಎಂ ಘಟಕದ ನಿರ್ವಾಹಕಿ ಸುಜಾತ ಮರವಂತೆ, ಮರವಂತೆ ಮೀನುಗಾರಿಕಾ ಸೊಸೈಟಿ ಉಪಾಧ್ಯಕ್ಷ ರತ್ನಾಕರ, ಗ್ರಾಮ ಪಂಚಾಯಿತಿ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಿಡಿಒ ಗೀತಾ ಸ್ವಾಗತಿಸಿದರು. ಎಸ್.ಜನಾರ್ದನ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ್ ಶೇರಿಗಾರ್ ವಂದಿಸಿದರು. ಕರುಣಾಕರ ಮರವಂತೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net