ಶುದ್ಧ ನೀರಿನ ಘಟಕ ಸದ್ಬಳಸಿಕೊಳ್ಳಿ

14UUJINI1
ಮಂಗಾಪುರದಲ್ಲಿ ಶುದ್ಧ ಕುಡಿವ ನೀರಿನ ಘಟಕವನ್ನು ಭಾನುವಾರ ಉದ್ಘಾಟಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ನವೀನ್, ನಿಂಬಳಗೆರೆ ಗ್ರಾಪಂ ಅಧ್ಯಕ್ಷ ರಾಜಶೇಖರ ಗೌಡ, ಸದಸ್ಯ ಬಸವರಾಜ ಇದ್ದರು.
Published on

ಉಜ್ಜಿನಿ: ಜನರ ಆರೋಗ್ಯ ದೃಷ್ಟಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಮಂಗಾಪುರದಲ್ಲಿ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಗ್ರಾಮದ ಮಹೇಶ್ವರ ಸ್ವಾಮಿ ರಥ ನಿರ್ಮಾಣಕ್ಕೆ 25 ಸಾವಿರ ರೂ.,ಐದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 3.75 ಲಕ್ಷ ರೂ., ಸಮುದಾಯ ಭವನಕ್ಕೆ 50 ಸಾವಿರ ರೂ.,

ವಾತ್ಸಲ್ಯ ಕಾಮಗಾರಿಗೆ 24 ಸಾವಿರ ರೂ., ಗ್ರಾಮದ ನಿರ್ಗತಿಕರಿಗೆ ವಾರ್ಷಿಕ 27 ಸಾವಿರ ರೂ. ಮಾಸಾಶನ, ಮೂವರು ವಿದ್ಯಾರ್ಥಿಗಳಿಗೆ ಸುಜ್ಞಾನ ಯೋಜನೆಯಡಿ ಶಿಷ್ಯ ವೇತನ ನೀಡಲಾಗುತ್ತಿದೆ ಎಂದರು. ನಿಂಬಳಗೆರೆ ಗ್ರಾಪಂ ಅಧ್ಯಕ್ಷ ರಾಜಶೇಖರ ಗೌಡ,

ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ನವೀನ್, ಗ್ರಾಪಂ ಸದಸ್ಯರಾದ ನೇತ್ರಾವತಿ ಓಬಳೇಶ್, ಉಮಾ ಸಿದ್ದೇಶ, ಬಸವರಾಜ, ಕೃಷಿ ಮೇಲ್ವಿಚಾರಕ ಮಹಾಂತೇಶ್, ಮೇಲ್ವಿಚಾರಕರಾದ ಯಶೋಧಮ್ಮ, ಮುಖಂಡರಾದ ಭೀಮಣ್ಣ, ಮಹೇಶಮ್ಮ ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net