ಕೆಂಪೇಗೌಡರ ಐಕ್ಯಸ್ಥಳ ಶುಚಿಗೊಳಿಸಿ

FotoJet
Published on

ಮಾಗಡಿ: ನಾಡಪ್ರಭು ಕೆಂಪೇಗೌಡರ ಐಕ್ಯಸ್ಥಳ ಕೆಂಪಾಪುರ ಅಭಿವೃದ್ಧಿ ಮಾಡಿ, ಇಲ್ಲವಾದರೆ ಖಾಸಗಿಯವರಿಗೆ ಅಭಿವೃದ್ಧಿ ಮಾಡಲು ಬಿಟ್ಟು ಬಿಡಿ ಎಂದು ಚಿಲುಮೆ ರವಿಕುಮಾರ್ ಫೌಂಡೇಷನ್ ಅಧ್ಯಕ್ಷ ಚಿಲುಮೆ ರವಿಕುಮಾರ್ ಹೇಳಿದರು.

ತಾಲೂಕಿನ ಕೆಂಪಾಪುರ ಗ್ರಾಮದ ನಾಡಪ್ರಭು ಕೆಂಪೇಗೌಡ ಐಕ್ಯ ಸ್ಥಳದಲ್ಲಿ ಚಿಲುಮೆ ರವಿಕುಮಾರ್ ಫೌಂಡೇಷನ್‌ನಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೆಂಗಳೂರು ಜನಕನ ಐಕ್ಯ ಸ್ಥಳ ನೋಡಿದರೆ ಬೇಜಾರಾಗುತ್ತದೆ. ಅಭಿವೃದ್ಧಿ ಇಲ್ಲದೆ ಬೀಳುವ ಸ್ಥಿತಿಯಲ್ಲಿ ಸಮಾಧಿಯಿದೆ. ಕಸ, ಬೇಲಿಗಳಿಂದ ತೊಂಬಿದ್ದ ಸ್ಥಳವನ್ನು ಸ್ವಚ್ಛತೆ ಮಾಡಬೇಕೆನ್ನುವ ದೃಷ್ಟಿಯಿಂದ ಸ್ವಯಂಸೇವಕರು, ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಮಾಡಿದ್ದಾರೆ ಎಂದರು.

ಗ್ರಾಮದ ಯುವ ಮುಖಂಡ ಹರೀಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಮಾಧಿ ನಮ್ಮ ಕೆಂಪಾಪುರದಲ್ಲಿರುವುದು ನಮ್ಮ ಪುಣ್ಯ. ಆದರೆ, ಐಕ್ಯಸ್ಥಳವನ್ನು ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯದಿಂದ ಕನಿಷ್ಠ ಸ್ವಚ್ಛತೆಯೂ ಮಾಡಿಲ್ಲ ಎಂದರು.

ಬೆಂಗಳೂರು ಉತ್ತರ ಅಧ್ಯಕ್ಷ ಗುರುಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯಹೊಸಪಾಳ್ಯ, ಪ್ರಜಾತರಂಗ ಫೌಂಡೇಷನ್ ಅಧ್ಯಕ್ಷ ಚನ್ನಕೇಶವ, ಮಧು, ಪವನ್ ಹೊಸಪಾಳ್ಯ, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಸ್ಥಳೀಯ ಮುಖಂಡ ಕಿರಣ್, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net